ಲಂಡನ್ ಸಮೀಪ ಲಾರಿ ಕಂಟೇನರ್ ನಲ್ಲಿ 39 ಶವ ಪತ್ತೆ
ಲಂಡನ್, ಅಕ್ಟೋಬರ್ 23: ಲಾರಿಯ ಕಂಟೇನರ್ ನಲ್ಲಿ ಬುಧವಾರ ಮೂವತ್ತೊಂಬತ್ತು ಶವಗಳು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಪೊಲೀಸರು ಕೊಲೆ ತನಿಖೆ ಆರಂಭಿಸಿದ್ದಾರೆ. ಮಾನವ ಕಳ್ಳಸಾಗಣೆ ಪ್ರಕರಣ ಇದಾಗಿರಬಹುದು ಎಂದು ಶಂಕಿಸಲಾಗಿದೆ. ಲಾರಿಯ ಕಂಟೇನರ್ ನಲ್ಲಿ ಮೂವತ್ತೆಂಟು ಮಂದಿ ವಯಸ್ಕರರು ಹಾಗೂ ಒಬ್ಬ ಹದಿಹರೆಯದ ವ್ಯಕ್ತಿಯ ಶವ ಸಿಕ್ಕಿದೆ.
ಶಂಕಿತ ಕೊಲೆ ಪ್ರಕರಣದಲ್ಲಿ ಇಪ್ಪತ್ತೈದು ವರ್ಷ ವಯಸ್ಸಿನ ಉತ್ತರ ಐರ್ಲೆಂಡ್ ನ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. "ಈ ದುರ್ಘಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಜೀವ ಕಳೆದುಕೊಂಡಿದ್ದಾರೆ. ಏನಾಗಿದೆ ಎಂದು ತಿಳಿಯುವ ಸಲುವಾಗಿ ತನಿಖೆ ನಡೆಯುತ್ತಿದೆ. ಸಂತ್ರಸ್ತರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಆದರೆ ಬಹಳ ದೀರ್ಘವಾದ ಪ್ರಕ್ರಿಯೆ ಆಗಲಿದೆ" ಎಂದು ಮುಖ್ಯ ಸೂಪರಿಂಟೆಂಡೆಂಟ್ ಆಂಡ್ರೂ ಮರೈನರ್ ಹೇಳಿದ್ದಾರೆ.
'ನಮ್ಮ ಪ್ರಕಾರ ಬಲ್ಗೇರಿಯಾದಿಂದ ಬಂದ ಲಾರಿ ಇದಾಗಿದ್ದು, ಅಕ್ಟೋಬರ್ ಹತ್ತೊಂಬತ್ತನೆ ತಾರೀಕಿನಂದು ಹೋಲಿಹೆಡ್ ನಲ್ಲಿ ದೇಶವನ್ನು ಪ್ರವೇಶಿಸಿದೆ. ಲಾರಿ ಚಾಲಕನನ್ನು ಪೊಲೀಸ್ ವಶದಲ್ಲಿ ಇರಿಸಿಕೊಳ್ಳಲಾಗಿದ್ದು, ನಮ್ಮ ತನಿಖೆ ನಡೆಯುತ್ತಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಎಸೆಕ್ಸ್ ಪೊಲೀಸರು ನೀಡಿರುವ ಮಾಹಿತಿ ಅನ್ವಯ, ಗ್ರೇಸ್ ನ ಈಸ್ಟರ್ನ್ ಅವೆನ್ಯೂದ ವಾಟರ್ ಗ್ಲೇಡ್ ಕೈಗಾರಿಕಾ ಪ್ರದೇಶದ ಪಾರ್ಕ್ ಒಳಗೆ ಲಾರಿಯ ಕಂಟೇನರ್ ಸಿಕ್ಕಿದೆ.












Click it and Unblock the Notifications