ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news: ಕುವೈತ್ ತೈಲ ಸಂಸ್ಕರಣಾ ಘಟಕದಲ್ಲಿ ಬೆಂಕಿ

|
Google Oneindia Kannada News

ಕುವೈತ್‌ನ ಮಿನಾ ಅಲ್-ಅಹ್ಮದಿ ತೈಲ ಸಂಸ್ಕರಣಾ ಘಟಕದ ಸಲ್ಫರ್ ತೆಗೆಯುವ ಘಟಕದಲ್ಲಿ ಸೋಮವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೇಶದ ರಾಷ್ಟ್ರೀಯ ಪೆಟ್ರೋಲಿಯಂ ಕಂಪನಿ (ಕೆಎನ್‌ಪಿಸಿ) ತಿಳಿಸಿದೆ.

ತೈಲ ಸಂಸ್ಕರಣಾ ಘಟಕದ ಸ್ಫೋಟದ ಶಬ್ದಕ್ಕೆ ಫಹಹೀಲ್ ಜಿಲ್ಲೆಯ ನಿವಾಸಿಗಳು ಬೆಚ್ಚಿದ್ದಾರೆ ಎಂದು ಎಪಿ ಹೇಳಿದೆ. ಆದರೆ, ಇಲ್ಲಿ ತನಕ ಯಾವುದೇ ಸಾವು ನೋವುಗಳ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ, ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಬೆಂಕಿ ತಗುಲಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

"ತೈಲ ಸಂಸ್ಕರಣಾ ಘಟಕ ಕಾರ್ಯಾಚರಣೆಗಳು ಮತ್ತು ರಫ್ತು ಕಾರ್ಯಾಚರಣೆಗಳ ಮೇಲೆ ಈ ದುರ್ಘಟನೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಸ್ಥಳೀಯ ಮಾರುಕಟ್ಟೆ ಕಾರ್ಯಾಚರಣೆಗಳು ಮತ್ತು ವಿದ್ಯುತ್ ಮತ್ತು ಜಲ ಸಚಿವಾಲಯಕ್ಕೆ ಪೂರೈಕೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ, ಎಲ್ಲವೂ ಸಮರ್ಪಕವಾಗಿವೆ," ಎಂದು KNPC ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿದೆ.

ಕಂಪನಿಯು ವಾತಾವರಣದ ಉಳಿಕೆ ಡೀಸಲ್ಫರೈಸೇಶನ್ ಘಟಕವನ್ನು (ARDS) ಪ್ರತ್ಯೇಕಿಸಿದೆ ಎಂದು ಹೇಳಿದೆ - ಇದು ಅಂತಿಮ ಉತ್ಪನ್ನದಿಂದ ಗಂಧಕ(Sulfur)ವನ್ನು ಬೇರ್ಪಡಿಸುತ್ತದೆ ಮತ್ತು ಘಟನಾ ಸ್ಥಳಕ್ಕೆ ತಲುಪಿರುವ ಅಗ್ನಿಶಾಮಕ ದಳದವರು ಈಗಾಗಲೇ ಅಗ್ನಿಜ್ವಾಲೆಯನ್ನು ನಂದಿಸಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂಬ ವರದಿ ಬಂದಿದೆ.

The prisoners are to be freed to mark the Thadingyut festival later in October

ಮಿನ ಅಲ್-ಅಹ್ಮದಿ ಸೌಲಭ್ಯದ ಸಾಮರ್ಥ್ಯವನ್ನು ದಿನಕ್ಕೆ 346,000 ಬ್ಯಾರೆಲ್‌ಗಳಿಗೆ ವಿಸ್ತರಿಸುವುದಾಗಿ KNPC ಕಳೆದ ತಿಂಗಳು ಪ್ರಕಟಿಸಿತ್ತು. ಇದು ಕಡಿಮೆ ಹೊರಸೂಸುವಿಕೆಯೊಂದಿಗೆ ಇಂಧನವನ್ನು ಉತ್ಪಾದಿಸುವ ಯೋಜನೆಯ ಭಾಗವಾಗಿದೆ.

ಸೌದಿ ಅರೇಬಿಯಾದ ಕುವೈತ್ ಗಡಿಯ ಉತ್ತರದ ಪರ್ಷಿಯನ್ ಕೊಲ್ಲಿಯಲ್ಲಿ ಈ ಸಂಸ್ಕರಣಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಇದು ಮುಖ್ಯವಾಗಿ ದೇಶದ ದೇಶೀಯ ಮಾರುಕಟ್ಟೆಗೆ ಗ್ಯಾಸೋಲಿನ್ ಮತ್ತು ಡೀಸೆಲ್ ಅನ್ನು ಪೂರೈಸುತ್ತದೆ.

ಕುವೈತ್ ದೇಶ 4 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆ ಒದಗಿಸಿದೆ ಮತ್ತು ಇದು ವಿಶ್ವದ ಆರನೇ ಅತಿದೊಡ್ಡ ತೈಲ ಸಂಗ್ರಹವನ್ನು ಹೊಂದಿದೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ...

(Reuters, AP)

English summary
An explosion at a refinery in Kuwait has sent plumes of smoke billowing into the sky. There are no reports of any casualties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X