ಕೊಪ್ಪಳದಲ್ಲಿ ಅ.30ರಂದು ಮಿನಿ ಉದ್ಯೋಗ ಮೇಳ

ಕೊಪ್ಪಳ, ಅಕ್ಟೋಬರ್ 27 : ಕೊಪ್ಪಳದಲ್ಲಿ ಅಕ್ಟೋಬರ್ 30ರಂದು ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ.

ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಮಿನಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 10.30 ರಿಂದ 2.30 ರವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ.

Job fair in Koppal on October 30, 2017

ಸೆಕ್ಯೂರಟಿ & ಇಂಟೆಲಿಜೆಂನ್ಸ್ ಸರ್ವಿಸ್, ಎಲ್.ಟಿ.ಡಿ ಬೆಂಗಳೂರು, ನವತಾ ರೋಡ್ ಟ್ರಾನ್ಸ್‍ಸ್ಪ್ರೋಟ್ಸ್ ಹುಬ್ಬಳ್ಳಿ, ಅಪ್ಪೇಂಟನ್ ಲರ್ನಿಂಗ್ ಸೆಲೂಶನ್ಸ್ ಗದಗ, ಆರ್.ಎನ್.ಎಸ್ ಮೋಟರ್ಸ್ ಹುಬ್ಬಳ್ಳಿ ಸೇರಿದಂತೆ ವಿವಿಧ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ.

ಮಿನಿ ಉದ್ಯೋಗ ಮೇಳಕ್ಕೆ ಪ್ರವೇಶ ಉಚಿತ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ (ಆಟೋಮೊಬೈಲ್, ಡಿಸೈಲ್ ಮೆಕಾನಿಕ್), ಡಿಪ್ಲೋಮಾ (ಅಟೋಮೊಬೈಲ್), ಯಾವುದೇ ಪದವಿ, ಪೋಸ್ಟ್ ಗ್ರಾಜುಯೆಟ್ಸ್, ಬಿ.ಎಡ್., ಎಸ್.ಎಸ್.ಸಿ., ವಿದ್ಯಾರ್ಹತೆ ಹೊಂದಿರುವವರು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲಾ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್, ಬಯೋಡಾಟಾ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ ಕೊಪ್ಪಳ ಇಲ್ಲಿಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 08539-220859, 9742498368.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+