ಕೊಪ್ಪಳದಲ್ಲಿ ಸಿಲಿಂಡರ್ ಸ್ಫೋಟ : 16 ಅಂಗಡಿಗೆ ಬೆಂಕಿ
ಕೊಪ್ಪಳ, ಜನವರಿ 21 : ಸಿಲಿಂಡರ್ ಸ್ಫೋಟದಿಂದಾಗಿ 16 ಅಂಗಡಿಗಳು ಸುಟ್ಟು ಹೋಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ. ಗ್ಯಾರೇಜ್, ಸಲೂನ್, ವರ್ಕ್ ಶಾಪ್, ಹೋಟೆಲ್ ಸೇರಿದಂತೆ 16 ಅಂಗಡಿಗಳು ಸುಟ್ಟು ಹೋಗಿವೆ.
ಮೊದಲು ಯಾವುದೋ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಅದು ನಿಯಂತ್ರಣಕ್ಕೆ ಬರುವ ಮೊದಲೇ ಹೋಟೆಲ್‌ಗೆ ಬೆಂಕಿ ಹೊತ್ತಿಕೊಂಡಿದೆ. ಅಲ್ಲಿ ಸಿಲಿಂಡರ್‌ಗಳು ಇದ್ದವು. ಅವು ಸ್ಫೋಟಗೊಂಡು ಬೆಂಕಿ ಉಳಿದ ಅಂಗಡಿಗಳಿಗೆ ಹಬ್ಬಿದೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಅಂಗಡಿ ಮಾಲೀಕರು ವಸ್ತುಗಳೆಲ್ಲ ಸುಟ್ಟು ಕರಕಲಾಗಿದ್ದರಿಂದ ಕಂಗಾಲಾಗಿದ್ದಾರೆ.












Click it and Unblock the Notifications