ಮಮತಾ ಬ್ಯಾನರ್ಜಿ ಘೋಷಣೆಯನ್ನೇ ಕಾಪಿ ಮಾಡುತ್ತಿದೆಯಾ ಬಿಜೆಪಿ?
ಕೋಲ್ಕತ್ತಾ, ಮಾರ್ಚ್ 18: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲಕ ಕಾಂಗ್ರೆಸ್ ಪಕ್ಷವು ಗೆಲುವು ಸಾಧಿಸಿದ ಬಳಿಕ ನಮ್ಮ ನಡೆ ದೆಹಲಿಯ ಕಡೆಗೆ ಹೊರಡಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಖರಗ್ಪುರ್‌ನಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಿದ ಅವರು, ಪರಿವರ್ತನೆ(Poribortan) ಎನ್ನುವುದು ಮಮತಾ ಬ್ಯಾನರ್ಜಿಯವರು ಘೋಷಣೆ ಆಗಿದೆ. ನೀವು ಅದನ್ನೇಕೆ ನಕಲು ಮಾಡುತ್ತಿದ್ದೀರಾ ಎಂದು ಭಾರತೀಯ ಜನತಾ ಪಕ್ಷವನ್ನು ನೇರವಾಗಿ ಪ್ರಶ್ನಿಸಿದರು.

"ಮತದಾರರೇ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದು ಇಷ್ಟೇ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ಹಣವನ್ನು ನೀಡಿದರೆ, ಹಣದ ಎದುರಿಗೆ ತಲೆ ಬಾಗಬೇಡಿ. ಏಕೆಂದರೆ ಅವರು ನೀಡುತ್ತಿರುವುದು ಸಾರ್ವಜನಿಕರ ಹಣ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿಕೊಂಡಿದ್ದಾರೆ.
'Poribortan'(change) is Mamata Banerjee's slogan; why are you copying Mamata Banerjee?... After winning Bengal, we will jump to Delhi & shake BJP: West Bengal CM & TMC leader Mamata Banerjee in Kharagpur pic.twitter.com/BlaUmCLGP9
— ANI (@ANI) March 18, 2021
"ಮಮತಾ ಬ್ಯಾನರ್ಜಿ ಅಂದರೆ ಪೀಪಲ್ಸ್ ಎನರ್ಜಿ":
ತೃಣಮೂಲ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಯಾವುದೇ ಮಾವೋವಾದಿ, ಎಡಪಂಥೀಯ ಮತ್ತು ಕಾಂಗ್ರೆಸ್ ಮಿತ್ರಪಕ್ಷಗಳಿಗೆ ಮತವನ್ನು ನೀಡದಂತೆ ನಾವು ಮನವಿ ಮಾಡಿಕೊಳ್ಳುತ್ತೇನೆ. ಮಮತಾ ಬ್ಯಾನರ್ಜಿ ಎಂದರೆ ಜನರ ಶಕ್ತಿ ಎಂಬುದು ಬಿಜೆಪಿಯವರಿಗೆ ಗೊತ್ತಿದೆ. ನಾನು ಜನರೊಂದಿಗೆ ಹೋರಾಡುತ್ತೇನೆ ವಿನಃ ಪಲಾಯನ ಮಾಡುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
8 ಹಂತಗಳಲ್ಲಿ ಪಶ್ಚಿಮ ಬಂಗಾಳ ಚುನಾವಣಾ ಮತದಾನ:
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.












Click it and Unblock the Notifications