ಪಶ್ಚಿಮ ಬಂಗಾಳ: ಸೆಪ್ಟೆಂಬರ್ 7ರಿಂದ ಮೂರು ದಿನ ಸಂಪೂರ್ಣ ಲಾಕ್‌ಡೌನ್
ಕೊಲ್ಕತ್ತ, ಆಗಸ್ಟ್ 26: ಪಶ್ಚಿಮ ಬಂಗಾಳದಲ್ಲಿ ಸೆಪ್ಟೆಂಬರ್ 7 ರಿಂದ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ಗೆ ಆದೇಶ ಹೊರಡಿಸಲಾಗಿದೆ.
ಸೆಪ್ಟೆಂಬರ್ 7,8 ಹಾಗೂ 12 ರಂದು ಲಾಕ್‌ಡೌನ್ ವಿಧಿಸಲಾಗಿದೆ. ಹಾಗೆಯೇ ರಾಜ್ಯ ಸರ್ಕಾರವು ಆಗಸ್ಟ್ 31ಕ್ಕೆ ಕೊನೆಗೊಳ್ಳಲಿರುವ ಲಾಕ್‌ಡೌನ್ ಅವಧಿಯನ್ನು ಸೆಪ್ಟೆಂಬರ್ 20ರವರೆಗೆ ವಿಸ್ತರಿಸಿದೆ.
ಕೊರೊನಾ ಹೆಚ್ಚಿರುವ 6 ರಾಜ್ಯಗಳಿಗೂ ಕೂಡ ವಿಮಾನ ಹಾರಾಟಕ್ಕೆ ಅನುಮತಿ ನೀಡಿದೆ. ಸೆಪ್ಟೆಂಬರ್ 1 ರಿಂದ ವಿಮಾನ ಹಾರಾಟ ನಡೆಸಲಿದೆ. ಶಿಕ್ಷಣ ಸಂಸ್ಥೆಗಳನ್ನು ಸೆಪ್ಟೆಂಬರ್ 20ರವರೆಗೆ ತೆರೆಯುವ ಸಾಧ್ಯತೆ ಇಲ್ಲ.

ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮ ಮೆಟ್ರೋ ಸೇವೆಯನ್ನು ಶೀಘ್ರ ಆರಂಭಿಸಲಾಗುತ್ತದೆ.ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 67,151 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.1059 ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟು 32,34,475 ಪ್ರಕರಣಗಳಿವೆ. 59,449 ಮಂದಿ ಸಾವನ್ನಪ್ಪಿದ್ದಾರೆ.24,67,759 ಮಂದಿ ಗುಣಮುಖರಾಗಿದ್ದಾರೆ. ಆಕ್ಸಫರ್ಡ್ ಲಸಿಕೆಯ ಎರಡನೇ ಹಂತದ ಪ್ರಯೋಗ ಭಾರತದಲ್ಲಿ ಆರಂಭವಾಗಿದೆ.












Click it and Unblock the Notifications