ಬೆಂಕಿ ಇಟ್ಟವನನ್ನೇ ಎಳೆದು ಜ್ವಾಲೆಗೆ ಹಾಕಿದ ಬಂಗಾಳದ ಯುವತಿ!
ಕೋಲ್ಕತ್ತಾ, ಮಾರ್ಚ್ 06: ಅದು ಪಶ್ಚಿಮ ಬಂಗಾಳದ ಮಾಲ್ಡಾ ಎಂಬಲ್ಲಿ ನಡೆದ ಬರ್ಬರ ಘಟನೆ. ಕಿಡಿಗೇಡಿಯೊಬ್ಬ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಸಜೀವವಾಗಿ ಕೊಲ್ಲಬೇಕೆಂದು ಪೆಟ್ರೋಲ್ ಸುರಿದು ಆಕೆಗೆ ಬೆಂಕಿ ಹಚ್ಚಿದ್ದ. ಆದರೆ ಬೆಂಕಿ ಉರಿಯುತ್ತಿದ್ದಂತೆಯೇ ಬೆಂಕಿ ಇಟ್ಟ ಯುವಕನ್ನೇ ಯುವತಿ ಎಳೆದು ಬಿಗಿದಪ್ಪಿಕೊಂಡಳು. ತಪ್ಪಿಸಿಕೊಳ್ಳಲಾಗದೆ, ಯುವಕನೂ ಬೆಂಕಿಯಲ್ಲಿ ಉರಿದಿದ್ದಾನೆ!
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮತ್ತು ಪೊಲೀಸರು ಆಗಮಿಸುವ ಹೊತ್ತಿಗೆ ಅತ್ಯಾಚಾರ ಎಸಗಿದ ಯುವಕ ಸುಟ್ಟ ಗಾಯಗಳಿಂದ ಮೃತನಾಗಿದ್ದರೆ, ಯುವತಿ ಬದುಕುದ್ದಳು! ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

"ತಾನು ವಿಧವೆಯಾಗಿದ್ದು, ವ್ಯಕ್ತಿಯೊಬ್ಬ ಸದಾ ಆಕೆಯ ಮನೆಯ ಬಳಿ ಬಂದು ಕಿರಿಕಿರಿ ನೀಡುತ್ತಿದ್ದ. ಮಂಗಳವಾರ ತಾನು ಮನೆಯಲ್ಲಿ ಒಬ್ಬಳೇ ಇದ್ದ ಸಮಯದಲ್ಲಿ ಬಂದಿದ್ದ ಆತ, ತನ್ನ ಮೇಲೆ ಅತ್ಯಾಚಾರ ಎಸಗಿ, ನಂತರ ತನ್ನನ್ನು ಸಾಯಿಸುವ ಸಲುವಾಗಿ ಬೆಂಕಿ ಇಟ್ಟಿದ್ದ. ಆ ಸಮಯದಲ್ಲಿ ತಾನು ಆತನನ್ನು ಗಟ್ಟಿಯಾಗಿ ತಬ್ಬಿಕೊಂಡೆ. ಬಿಡಿಸಿಕೊಳ್ಳಲಾಗದೆ ಆತನೂ ಸಜೀವವಾಗಿ ಸುಟ್ಟುಹೋದ" ಎಂದು ಯುವತಿಯೇ ವಿಚಾರಣೆಯ ಸಮಯದಲ್ಲಿ ಹೇಳಿಕೊಂಡಿದ್ದಾಳೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications