Video: ಕೋಲ್ಕತ್ತಾದಲ್ಲಿ ಹೊತ್ತಿ ಉರಿದ ಚರ್ಮದ ಕಾರ್ಖಾನೆ; ಈಗ ಹೇಗಿದೆ ಪರಿಸ್ಥಿತಿ?

ಜನದಟ್ಟಣೆಯ ಪ್ರದೇಶದಲ್ಲಿ 3 ಮಹೆರ್ ಅಲಿ ಲೇನ್‌ನಲ್ಲಿ ಚರ್ಮಕ್ಕಾಗಿ ಬಳಸುತ್ತಿದ್ದ ಕಟ್ಟಡದಲ್ಲಿ ಸಂಜೆ 6.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 15 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿವೆ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ.

ಸುದ್ದಿ ಸಂಸ್ಥೆ ANI ಪ್ರಕಾರ, ಕಟ್ಟಡದ ಪಕ್ಕದಲ್ಲಿದ್ದ ಗುಡಿಸಲುಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಯಾವುದೇ ಸಾವಿನ ಬಗ್ಗೆ ವರದಿಯಾಗಿಲ್ಲ:

ಅಗ್ನಿ ಅವಘಡದ ಬಗ್ಗೆ ನಮಗೆ ಸಂಜೆ 6.30ರ ಸುಮಾರಿಗೆ ಮಾಹಿತಿ ಸಿಕ್ಕಿತು. ಇದೊಂದು ಚರ್ಮದ ಕಾರ್ಖಾನೆಯಾಗಿದ್ದು, ಕಿರಿದಾದ ಮಾರ್ಗದಿಂದಾಗಿ ಅಗ್ನಿಶಾಮಕ ಸಿಬ್ಬಂದಿ ತೊಂದರೆ ಎದುರಿಸುತ್ತಿದ್ದಾರೆ. ಅದಾಗ್ಯೂ, 15ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಪಶ್ಚಿಮ ಬಂಗಾಳ ಅಗ್ನಿಶಾಮಕ ಸೇವೆಗಳ ಸಚಿವ ಸುಜಿತ್ ಬೋಸ್ ತಿಳಿಸಿದ್ದಾರೆ.

Video: A Massive Fire Breaks Out at a Godown in the Tangra Area of Kolkata

ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ಡಿಜಿ:

15 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿದ್ದು, ಹಾನಿಯ ಬಗ್ಗೆ ಇನ್ನೂ ಹೇಳಲಾಗದು. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೋಲ್ಕತ್ತಾದ ತಂಗ್ರಾ ಪ್ರದೇಶದಲ್ಲಿ ಅಗ್ನಿಶಾಮಕ ದಳದ ಡಿಜಿ ರಣವೀರ್ ಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+