ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಸುವೇಂದು ಅಧಿಕಾರಿ

ಕೋಲ್ಕತ್ತ, ಡಿಸೆಂಬರ್ 19: ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಹೊರಬಂದಿದ್ದ ಸುವೇಂದು ಅಧಿಕಾರಿ ಇಂದು ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಅಮಿತ್ ಶಾ ಭೇಟಿ ನೀಡಿದ್ದು, ಅವರ ಸಮ್ಮುಖದಲ್ಲಿ ಸುವೇಂದು ಅಧಿಕಾರಿ ಅಧಿಕೃತವಾಗಿ ಬಿಜೆಪಿ ಸೇರಿದರು.

ಟಿಎಂಸಿಯ ಸದಸ್ಯರಿಗೆ ಪತ್ರ ಬರೆದಿರುವ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್‌ನಲ್ಲಿ ಆಳವಾದ ಕೊಳೆತ ಮತ್ತು ಅಸ್ವಸ್ಥತೆ ಉಂಟಾಗಿದೆ, ಒಂದೇ ದಿನದಲ್ಲಿ ಯಾವುದೇ ವ್ಯಕ್ತಿಯಿಂದ ಟಿಎಂಸಿ ಸ್ಥಾಪನೆಯಾಗಿಲ್ಲ.ಇದು ಬೃಹತ್ ಪ್ರಮಾಣದಲ್ಲಿ ನಿರಂತರ ಪ್ರಯತ್ನವಾಗಿತ್ತು ಎಂದು ಬರೆದಿದ್ದಾರೆ.

Suvendu Adhikari Joins BJP In Presence Of Amit Shah

ಅಧಿಕಾರಿ ಇತ್ತೀಚಿಗೆ ತೃಣಮೂಲ ಕಾಂಗ್ರೆಸ್ ಅಧಿ ನಾಯಕಿ ಮಮತಾ ಬ್ಯಾನರ್ಜಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಪಶ್ಚಿಮ ಬಂಗಾಳ ವಿಧಾನಸಭೆಯ ಸದಸ್ಯತ್ವಕ್ಕೂ ಅವರು ರಾಜೀನಾಮೆಯನ್ನು ನೀಡಿದ್ದಾರೆ.

ಪಕ್ಷದ ಸದಸ್ಯನಾಗಿ ಯಾವಾಗಲೂ ಮೌಲ್ಯಗಳೊಂದಿಗೆ ಸೇವೆ ಸಲ್ಲಿಸಿದ್ದು, ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದು ಮಮತಾ ಬ್ಯಾನರ್ಜಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಸುವೇಂದು ಅಧಿಕಾರಿ ಬರೆದಿದ್ದಾರೆ.

ಸುವೇಂದು ಅಧಿಕಾರಿಗೆ ಮಿಡ್ನಾಪುರ್ ಜಿಲ್ಲೆಯಲ್ಲಿ ಉತ್ತಮ ರಾಜಕಾರಣಿ ಎಂಬ ಬಿರುದಿದೆ. ಅವರ ಕುಟುಂಬ ಹಲವು ವರ್ಷಗಳಿಂದ ರಾಜಕಾರಣದಲ್ಲಿದೆ. ಸುವೇಂದು ಅವರ ತಂದೆ ಕಾಂಗ್ರೆಸ್‌ನಿಂದ ಸಂಸದರಾಗಿದ್ದರು. ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಇವರ ರಾಜೀನಾಮೆಯಿಂದ ಟಿಎಂಸಿ 80 ಕ್ಕೂ ಅಧಿಕ ಮತದಾರರನ್ನು ಕಳೆದುಕೊಂಡಂತಾಗಿದೆ.

ಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಹೊರಬಂದಿರುವ ಸುವೇಂದು ಅಧಿಕಾರಿಗೆ 'ಝಡ್' ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ.

ಸುವೇಂದು ಮೇಲೆ ಇಲ್ಲಿಯವರೆಗೆ 11 ಬಾರಿ ಹಲ್ಲೆ ನಡೆದಿದ್ದು, ತಮಗೆ ಸೂಕ್ತ ಭದ್ರತೆ ನೀಡುವಂತೆ ಸುವೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದರು. ಹೀಗಾಗಿ ಸರ್ಕಾರ ಈ ಹಿನ್ನೆಲೆಯಲ್ಲಿ ಭದ್ರತೆ ನೀಡಲು ಮುಂದಾಗಿದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ, ಸುವೇಂದು ಅಧಿಕಾರಿಯ ಭದ್ರತಾ ವ್ಯವಸ್ಥೆಯನ್ನು ಕೇಂದ್ರ ಭದ್ರತಾ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಪರಿಶೀಲಿಸಲಾಗಿದ್ದು, ಝಡ್ ಶ್ರೇಣಿಯ ಭದ್ರತೆ ನೀಡಲು ನಿರ್ಧರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+