Gruha Lakshmi: ಗೃಹಲಕ್ಷ್ಮೀ ಹಣ ಪಡೆಯಲು ಹೊಸ ನಿಯಮ: ಅಂಗನವಾಡಿ ಸಿಬ್ಬಂದಿ ನೆರವು, ಸರ್ಕಾರದ ಮಾಸ್ಟರ್ ಪ್ಲ್ಯಾನ್
ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹ ಲಕ್ಷ್ಮೀ'ಯೋಜನೆಯಡಿ ಅನರ್ಹ ಫಲಾನುಭವಿಗಳಿಗೆ ಹಣ ಸಂದಾಯವಾಗಿದ್ದು ಪತ್ತೆ ಆಗುತ್ತಿದ್ದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮತ್ತೊಮ್ಮೆ ಹೊಸದಗಿ ಅರ್ಜಿ ಸಲ್ಲಿಸುವಂತೆ ಈಗಾಗಲೇ ತಿಳಿಸಿದ್ದಾರೆ. ಇದರ ಬೆನ್ನಲ್ಲೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ತಯಾರಿ ನಡೆಸಿದ್ದು, ಸರ್ಕಾರ ಯೋಜನೆ ಫಲಾನುಭವಿಗಳಾಗಲು ಹೊಸ ಮಾರ್ಗಸೂಚಿ ಹೊರಡಿಸಲಿದೆ. ಇದರ ಕೆಲಸಗಳು ಅಂತಿಮ ಹಂತದಲ್ಲಿದ್ದು, ಇನ್ನೇರಡು ದಿನಗಳಲ್ಲಿ ಮಾರ್ಗಸೂಚಿಗಳು ಪ್ರಕಟಿಸುವ ಸಾಧ್ಯತೆ ಇದೆ.
ಗೃಹ ಲಕ್ಷ್ಮೀಯ ಹಣ ಮನೆಗೊಬ್ಬ ಗೃಹಿಣಿ/ಯಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವ ಯೋಜನೆಯಾಗಿದೆ. ಕಳೆದ ಮೂರು ವರ್ಷಗಳಿಂದ ಮಹಿಳೆಯರಿಗೆ ಹಣ ಪಾವತಿಸಲಾಗುತ್ತಿದೆ. ಆದರೆ ಸಿರಿವಂತರು, ಆದಾಯ ತೆರಿಗೆ ಇಲಾಖೆಗೆ ರಿಟನ್ಸ್ ಪಾವತಿದಾರರಿಗೆ, ಮೃತಪಟ್ಟಿವರಿಗೂ ಹಣ ಪಾವತಿ ಆಗುತ್ತಿತ್ತು. ಇದರಿಂದ ಕೋಟ್ಯಂತರ ರೂಪಾಯಿ ಹಣವನ್ನು ಅರ್ಹತೆ ಇಲ್ಲದವರು ಪಡೆಯುತ್ತಿದ್ದರು. ಇದಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ನಿಯಮ ಬಿಗಿಗೊಳಿಸಿ ಒಂದಷ್ಟು ಅನರ್ಹರನ್ನು ಪತ್ತೆ ಮಾಡಲಾಗಿತ್ತು. ಇದೀಗ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಸ ಕಲ್ಪಿಸಿದ ಬೆನ್ನಲ್ಲೆ ಅರ್ಹ ಅನಕ್ಷರಸ್ಥರಿಗೂ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಅಂಗನವಾಡಿ ಸಿಬ್ಬಂದಿಯನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ.

ಅಂಗನವಾಡಿ ಸಿಬ್ಬಂದಿ ನೆರವು
ಕೆಲವರಿಗೆ ಅರ್ಜಿ ಸಲ್ಲಿಸಲು ಬರದಿದ್ದರೆ ಅವರು ಯೋಜನೆಯಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರದ ಗೃಹ ಲಕ್ಷ್ಮೀ ಯೋಜನೆಗೆ ಮೊದಲ ಬಾರಿಗೆ ಅಂಗನವಾಡಿ ಸಿಬ್ಬಂದಿ ಮೊಬೈಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಿದೆ. ಅವರ ಮೊಬೈಲ್‌ನಲ್ಲಿ 'ಗೃಹ ಲಕ್ಷ್ಮೀ' ಯೋಜನೆ ಆಪ್ ಇನ್‌ಸ್ಟಾಲ್ ಮಾಡಿ, ಆಪ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಿದೆ. ಇದರೊಂದಿಗೆ ಅರ್ಹ ದಾಖಲಾತಿಗಳ ಮೂಲಕ ಗೃಹಿಣಿಯರು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಕೇಂದ್ರಗಳ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆಗೆ ಯಾರು ಅರ್ಹರು?
ರಾಜ್ಯದಲ್ಲಿ ಬ್ಯಾಂಕ್ ಖಾತೆ ಹೊಂದಿದ ಮತ್ತು ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿದ ಬಡವರು ಈ ಯೋಜನೆಗೆ ಅರ್ಹರಾಗಿದ್ದಾರೆ. ಅವರು ಸರ್ಕಾರ ಅಧಿಸೂಚನೆ ಹೊರಡಿಸುತ್ತಿದ್ದಂತೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಿದೆ.
ಆದಾಯ ಇಲಾಖೆಗೆ ಐಟಿ ರಿಟರ್ನ್ಸ್ ಪಾವತಿಸದವರು, ರಾಜ್ಯ ನಿವಾಸಿಗಳಿಗೆ ಮಾಸಿಕ 2ಸಾವಿರ ರೂ ಪಾವತಿಸಲು ಸರ್ಕಾರ ಮುಂದಾಗಿದೆ.
ಫೇಸ್ ರೆಕಗ್ನೇಷನ್, ಬಯೋ ಮೆಟ್ರಿಕ್ ಸಂಗ್ರಹ
ಈ ಬಾರಿ ಅರ್ಜಿ ಸಲ್ಲಿಕೆ ವೇಳೆ ಫಲಾನುಭವಿ ಮಹಿಳೆಯರ ಮುಖ ದೃಢೀಕರಣ, ಬಯೋ ಮೆಟ್ರಿಕ್ ಮೂಲಕ ಅರ್ಹ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕಿದೆ. ಈ ಮೂಲಕ ಮೃತರಿಗೆ ಹಾಗೂ ಅನರ್ಹರ ಖಾತೆಗೆ ಹಣ ಹೋಗುವುದನ್ನು ತಡೆಯಲು ಸರ್ಕಾರ ಮಹತ್ವದ ಪ್ಲ್ಯಾನ್ ಮಾಡಿಕೊಂಡಿದೆ.
ದಾಖಲೆಗಳು ಏನು ಬೇಕು?
* ಮಹಿಳಾ ಫಲಾನುಭವಿ ಆಧಾರ್ ಕಾರ್ಡ್
* ಪತಿಯ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್/ಸಂಖ್ಯೆ
* ರೇಷನ್ ಕಾರ್ಡ್
* ಸ್ವಯಂ ಘೋಷಣಾ ಪತ್ರ
* ವಿಧವೆ ಮಹಿಳೆಯಾಗಿದ್ದರೆ ಪತಿಯ ಮರಣ ಪ್ರಮಾಣ ಪತ್ರ.
ಖಾತೆ ಇಲ್ಲದಿದ್ದರೂ 46 ಕೋಟಿ ರೂ ಪಾವತಿ!
ರಾಜ್ಯದಲ್ಲಿ ಗೃಹ ಲಕ್ಷ್ಮೀ ಯೋಜನೆ ಜಾರಿಯಾದ ಬಳಿಕ ಸುಮಾರು ಹತ್ತು ಲಕ್ಷ ಮಹಿಳೆಯರು ಆಗಾಗ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿದ್ದಾರೆ. ಇನ್ನೂ 23,000 ಮಹಿಳೆಯರಿಗೆ ಬ್ಯಾಂಕ್ ಖಾತೆ ಇಲ್ಲದಿದ್ದರೂ ಸುಮಾರು 46 ಕೋಟಿ ರೂಪಾಯಿ ಪಾವತಿಯಾಗಿದೆ. ಇದು ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದೆ. ಇಂತಹ ಎಲ್ಲ ಪ್ರಮಾದಗಳು ಮುಂದೆ ಆಗದಂತೆ ತಡೆಯಲು ಸರ್ಕಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ. ಕೊನೆ ಹಂತದ ತಯಾರಿಯಲ್ಲಿದ್ದು, ಇದೇ ವಾರಾಂತ್ಯಕ್ಕೆ ಪ್ರಕಟಿಸುವ ಸಾಧ್ಯತೆ ಇದೆ.













Click it and Unblock the Notifications