Bidadi Property Prices: ಬಿಡದಿಯಲ್ಲಿ ಭೂಮಿಗೆ ಬಂಗಾರದ ಬೆಲೆ: ಈಗ ಮಾರಾಟ ಮಾಡಿದರೆ ರೈತರಿಗೆ ಲಾಭ - ನಷ್ಟ ಲೆಕ್ಕಾಚಾರ ಹೇಗಿದೆ

ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಬೆಂಗಳೂರಿನೊಂದಿಗೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭೂಮಿ - ಪ್ರಾಪರ್ಟಿ ಬೆಲೆಯು ಸಹ ಹೆಚ್ಚಾಗಿದೆ. ಇದೀಗ ಬಿಡದಿ ಟೌನ್‌ಶಿಪ್ ನಿರ್ಮಾಣ ವಿಚಾರವು ಭಾರೀ ಚರ್ಚೆ ಆಗುತ್ತಿದೆ. ಇದರೊಂದಿಗೆ ಬಿಡದಿ ಹಾಗೂ ಬಿಡದಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಬಿಡದಿಯಲ್ಲಿ ಈಗ ಪ್ರಾಪರ್ಟಿ - ಭೂಮಿ ಬೆಲೆ ಎಷ್ಟಿದೆ, ಈಗ ಭೂಮಿ ಮಾರಾಟ ಮಾಡಿದರೆ ರೈತರಿಗೆ ಎಷ್ಟು ಕೋಟಿ ನಷ್ಟವಾಗಲಿದೆ ಎನ್ನುವ ವಿವರ ಇಲ್ಲಿದೆ. ಬಿಡದಿಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಉದ್ದೇಶಿತ ಟೌನ್‌ಶಿಪ್ - ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ನಿರ್ಮಾಣ ಯೋಜನೆಗೆ ರಾಮನಗರ ಮತ್ತು ಹಾರೋಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಾಗೂ ಬಿಡದಿ ಭಾಗ ಸೇರಿದಂತೆ ಒಟ್ಟು 7,400 ಎಕರೆಗಳಿಂದ 9,600 ಎಕರೆಗಳಷ್ಟು ಬೃಹತ್ ಜಾಗದ ಅವಶ್ಯಕತೆಯಿದೆ. ಇದು ಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಹೀಗಾಗಿ, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈಗಾಗಲೇ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಪ್ರಾರಂಭವಾಗಿದೆ.

Bidadi Property Prices: ಬಿಡದಿಯಲ್ಲಿ ಎಷ್ಟಿದೆ ಭೂಮಿಯ ಬೆಲೆ ?

ಬಿಡದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆಯು ಹೆಚ್ಚಳವಾಗಿದೆ. ಬಿಡದಿಯಲ್ಲಿ ವಸತಿ ಪ್ಲಾಟ್‌ಗಳ ಬೆಲೆಯು ಪ್ರತಿ ಚದರ ಅಡಿಗೆ 3,000 ರೂ.ದಿಂದ ರಿಂದ 3,750 ರೂ. ವರೆಗೆ ಇದೆ. 30x40 ಚದರ ಅಡಿ ಪ್ಲಾಟ್‌ನ ಬೆಲೆಯು 36 ಲಕ್ಷರೂ.ದಿಂದ 45 ಲಕ್ಷ ರೂ.ಗಳ ವರೆಗೆ ಇದೆ. ಹೆದ್ದಾರಿ ಸಾಮೀಪವನ್ನು ಅವಲಂಬಿಸಿ, ದೊಡ್ಡ ಕೃಷಿ ಅಥವಾ ಕೈಗಾರಿಕಾ ಪ್ರದೇಶಗಳಿಗೆ ಅನುಗುಣವಾಗಿ ಪ್ರಾರ್ಪಟಿ ಬೆಲೆ ಇದೆ. ಎಕರೆಗೆ 2 ರಿಂದ 2.5 ಕೋಟಿಗಳವರೆಗೆ ಮೌಲ್ಯ ಇದೆ. ಸರ್ಕಾರವು ಸಹ ಇದೇ ದರವನ್ನು ನೀಡುವುದಾಗಿಯೇ ಹೇಳುತ್ತಿದೆ. ಆದರೆ ಇದರಿಂದ ರೈತರಿಗೆ ದೀರ್ಘ ಅವಧಿಯಲ್ಲಿ ನಷ್ಟವೇ ಆಗಲಿದೆ ಎನ್ನುವ ಲೆಕ್ಕಾಚಾರ ಜೋರಾಗಿದೆ. ಈಗ ರೈತರ ಭೂಮಿಗೆ ಹೆಚ್ಚಿನ ಬೆಲೆ ಸಿಕ್ಕರೂ ಮುಂದೆ ಇನ್ನಷ್ಟು ದೊಡ್ಡ ಮೊತ್ತಕ್ಕೆ ಭೂಮಿ ಮಾರಾಟವಾಗುವ ಸಾಧ್ಯತೆ ಇದೆ. ಅಲ್ಲದೆ ಭೂಮಿ ಮಾರಾಟ ಮಾಡುವುದರಿಂದ ರೈತರು ಕೃಷಿ - ಕುಲಕಸುಬುಗಳನ್ನು ಕಳೆದುಕೊಳ್ಳಲಿದ್ದಾರೆ. ಆರ್ಥಿಕವಾಗಿ ಗಟ್ಟಿ ಇರುವವರು ಹಾಗೂ ಆರ್ಥಿಕ ಜ್ಞಾನವುಳ್ಳವರು ಮಾತ್ರ ಭೂಮಿ ಮಾರಾಟ ಮಾಡಿದ ಮೇಲೆಯೂ ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಹೀಗಾಗಿ, ಈಗ ಭೂಮಿ ಮಾರಾಟ ಮಾಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಾಗಿದೆ.

Bidadi Property Prices

ಈಗ ಬಿಡದಿಯಲ್ಲಿ ಒಂದು ಸೈಟ್‌ನ ಬೆಲೆಯು 70ರಿಂದ 80 ಲಕ್ಷ ರೂಪಾಯಿ ಇದೆ. ಆದರೆ ಈಗ ಸರ್ಕಾರ ರೈತರಿಗೆ 2ರಿಂದ 2.5 ಕೋಟಿ ರೂಪಾಯಿ ಮಾತ್ರ ಎಂದು ದರ್ಶನ್ ಎಂ.ಕೆ ಗೌಡ (Darshan M K Gowda) ಎನ್ನುವವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈಗ ಸರ್ಕಾರವು ಕೊಡುತ್ತಿರುವ ಬೆಲೆಯಿಂದ ರೈತರಿಗೆ ಅನ್ಯಾಯವಾಗಲಿದೆ. ಈಗ ರೈತರು ಭೂಮಿ ಎಲ್ಲವನ್ನೂ ಕೊಟ್ಟು ಊರು ಬಿಟ್ಟರೆ ಮುಂದೆ ಸರ್ಕಾರದವರು ಭೂಮಿ ಮಾರಾಟ ಮಾಡುತ್ತಾರೆ. ಆಗ ಭೂಮಿ ಬೆಲೆಯು 18ರಿಂದ 20 ಕೋಟಿಗೆ ಮುಂದೆ ಮಾರಾಟವಾಗುವ ಸಾಧ್ಯತೆ ಇದೆ. ಮುಂದೆ 16 ಕೋಟಿ ರೂಪಾಯಿ ಲಾಭ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ರೈತರು ಭೂಮಿ ಮಾರಾಟ ಮಾಡಿದರೆ ಅವರಿಗೆ ನಷ್ಟವೇ ಆಗಲಿದೆ ಎಂದು ಹೇಳಿದ್ದಾರೆ.

 ಬಿಡದಿ ಟೌನ್‌ಶಿಪ್: ಈ ಮೂಲಕ ನಿರ್ಮಾಣ ಯೋಜನೆ ಜಾರಿ ಮಾಡಲಿದ್ದೇವೆ ಎಂದ ಸರ್ಕಾರ, ಏನಿದು ಪ್ಲ್ಯಾನ್
ಬಿಡದಿ ಟೌನ್‌ಶಿಪ್: ಈ ಮೂಲಕ ನಿರ್ಮಾಣ ಯೋಜನೆ ಜಾರಿ ಮಾಡಲಿದ್ದೇವೆ ಎಂದ ಸರ್ಕಾರ, ಏನಿದು ಪ್ಲ್ಯಾನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+