ವಾರದಲ್ಲಿ ಎರಡು ದಿನ ಕೊಲ್ಕತ್ತ ವಿಮಾನ ನಿಲ್ದಾಣ ಬಂದ್

ಕೊಲ್ಕತ್ತ, ಜುಲೈ 24: ವಾರದಲ್ಲಿ ಎರಡು ದಿನ ಕೊಲ್ಕತ್ತ ವಿಮಾನ ನಿಲ್ದಾಣ ಬಂದ್ ಆಗಲಿದೆ. ಜುಲೈ 25 ಹಾಗೂ ಜುಲೈ 29 ರಂದು ಕೊಲ್ಕತ್ತಕ್ಕೆ ಬರುವ ಹಾಗೂ ಕೊಲ್ಕತ್ತದಿಂದ ಹೋಗುವ ವಿಮಾನಗಳಿಗೆ ನಿರ್ಬಂಧ ಹೇರಲಾಗಿದೆ.

Recommended Video

      40 ಸಾವಿರ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಕಳುಹಿಸಿದ ಚೀನಾ | Oneindia Kannada

      ಕೊರೊನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಆಗಸ್ಟ್ 31ರವರೆಗೂ ವಾರದಲ್ಲಿ ಎರಡು ದಿನ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

      ಮೊದಲು ಒಂದು ದಿನ ಪ್ರಯೋಗಾತ್ಮಕವಾಗಿ ಲಾಕ್‌ಡೌನ್ ಮಾಡಲಾಗಿತ್ತು, ಉತ್ತಮ ಪ್ರತಿಕ್ರಿಯೆ ಬಂದ ಬಳಿಕ ವಿಸ್ತರಿಸಲಾಗುತ್ತಿದೆ.

      No Flights In Or Out Of Kolkata On 2 Days In A Week

      ಕೊಲ್ಕತ್ತದಲ್ಲಿ ಸಮುದಾಯ ಸೋಂಕು ಹರಡುತ್ತಿದ್ದು, ವಾರದಲ್ಲಿ ಎರಡು ದಿನವಾದರೂ ಲಾಕ್‌ಡೌನ್ ಮಾಡಿ ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಬೇಕಿದೆ, ಹೀಗಾಗಿ ಆಗಸ್ಟ್ 31ರವರೆಗೆ ವಾರದಲ್ಲಿ ಎರಡು ದಿನ ಲಾಕ್‌ಡೌನ್ ಮಾಡಲಾಗುತ್ತಿದೆ.

      ಲಾಕ್‌ಡೌನ್ ಸಂದರ್ಭದಲ್ಲಿ ಖಾಸಗಿ ಕಚೇರಿಗಳು, ವಾಣಿಜ್ಯ ಕಟ್ಟಡಗಳು, ವಾಹನಗಳ ಸಂಚಾರಕ್ಕೆ ನಿರ್ಬಂಧವಿರಲಿದೆ. ಕೇವಲ ತುರ್ತು ಸೇವೆಗಳು ಮಾತ್ರ ಇರಲಿವೆ. ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ನಿತ್ಯ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಒಟ್ಟು 51757 ಪ್ರಕರಣಗಳಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+