ನೊಬೆಲ್ ಗೆದ್ದ ಮಗನ ಮೇಲೆ ಕೋಪ, ಮಾತನಾಡೊಲ್ಲ ಎಂದ ಅಮ್ಮ!

Recommended Video

      Indian Origin Economist Abhijit Banerjee gets Nobel prize | Oneindia Kannada

      ಕೊಲ್ಕತ್ತಾ, ಅಕ್ಟೋಬರ್ 14: ನೊಬೆಲ್ ಪ್ರಶಸ್ತಿ ಗೆದ್ದ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿಯವರ ಕುರಿತಂತೆ ಮಾತನಾಡಿದ ಅವರ ತಾಯಿ, ಕೊಲ್ಕತ್ತದ ನಿರ್ಮಳಾ ಬ್ಯಾನರ್ಜಿ, 'ನನ್ನ ಮಗನ ಮೇಲೆ ನನಗೆ ಕೋಪ ಬಂದಿದೆ. ಆದ್ದರಿಮದ ನಾನು ಅವನ ಬಳಿ ಮಾತನಾಡೊಲ್ಲ' ಎಂದಿದ್ದಾರೆ! ಆದರೆ ಅದು ಹುಸಿಮುನಿಸಿನಿಂದ!

      "ನಿನ್ನೆ(ಅಕ್ಟೋಬರ್ 13) ಯಷ್ಟೇ ನಾನು ನನ್ನ ಮಗನ ಬಳಿ ಮಾತನಾಡಿದ್ದೆ. ಆದರೆ ಆಗ ಅವನು ತನಗೆ ನೊಬೆಲ್ ಪ್ರಶಸ್ತಿ ಬರುತ್ತಿದೆ ಎಂದು ಹೇಳಿರಲೇ ಇಲ್ಲ. ಅದಕ್ಕೇ ನನಗೆ ಅವನ ಮೇಲೆ ಕೋಪ ಬಂದಿದೆ" ಎಂದು ನಿರ್ಮಲಾ ಹೇಳಿದರು. ಮಗನಿಗೆ ಜಗತ್ತಿನ ಅತ್ಯುನ್ನತ ಗೌರವ ಬಂದಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ ಅವರು ತಮಾಷೆಗಾಗಿ ಈ ರೀತಿ ಹೇಳಿದರು.

      ಅಭಿಜಿತ್ ಯಾವಾಗಲೂ ಅರ್ಥಶಾಸ್ತ್ರವನ್ನು ಸೈದ್ಧಾಂತಿಕ ಶಾಸ್ತ್ರವನ್ನಾಗಿಯಷ್ಟೇ ನೋಡದೆ, ಅದನ್ನು ಪ್ರಾಯೋಗಿಕವಾಗಿ ಅಳವಡಿಸಲು ಯತ್ನಿಸುತ್ತಾನೆ. ನಾವು ಬಹಳ ಸಾರಿ ಫೋನಿನಲ್ಲಿ ಮಾತನಾಡುವಾಗ ಅರ್ಥಶಾಸ್ತ್ರದ ಬಗ್ಗೆಯೇ ಮಾತನಾಡುತ್ತೇವೆ. ಭಾರತ ಎದುರಿಸುತ್ತಿರುವ ಆರ್ಥಕ ಸಮಸ್ಯೆಯ ಬಗ್ಗೆಯೂ ಅಭಿಜಿತ್ ಸದಾ ಮಾತನಾಡುತ್ತಾನೆ" ಎಂದು ನಿರ್ಮಲಾ ಹೇಳಿದರು.

      Nirmala Banerjee On Son Abhijith Banerjees Nobel Journey

      ಅಮೆರಿಕದಲ್ಲಿ ವಾಸವಿರುವ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಈಸ್ಟರ್ ಡಲ್ಫೋ ಅವರಿಗೆ 2019 ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭ್ಯವಾಗಿದೆ. ಅರ್ಥಶಾಸ್ತ್ರಜ್ಞ ಮೈಖೇಲ್ ಕ್ರೆಮರ್ ವರೊಂದಿಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಭಿಜಿತ್ ಬ್ಯಾನರ್ಜಿ ಹಂಚಿಕೊಂಡಿದ್ದಾರೆ.

      58 ವರ್ಷ ವಯಸ್ಸಿನ ಅಭಿಜಿತ್ ಬ್ಯಾನರ್ಜಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡುತ್ತಿದ್ದರು. ಅಮೆರಿಕದ ಮೆಸಾಚ್ಯುಯೇಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಅಭಿಜಿತ್ ಪಶ್ಚಿಮಬಂಗಾಳದ ಕೊಲ್ಕತ್ತಾ ಮೂಲದವರು. ಇನ್ನು ಇವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡ ಇಬ್ಬರಲ್ಲಿ ಒಬ್ಬರಾದ 47 ವರ್ಷ ವಯಸ್ಸಿನ ಇಸ್ಟರ್ ಡುಲ್ಫೋ ಅವರು ಬ್ಯಾನರ್ಜಿ ಅವರ ಪತ್ನಿಯಾಗಿದ್ದು, ಅವರ ಸಹೋದ್ಯೋಗಿಯಾಗಿದ್ದರು.

      ಕಳೆದ ಎರಡು ದಶಕಗಳಲ್ಲಿ ಅಭಿವೃದ್ಧಿ ಆರ್ಥಿಕತೆಗೆ ಸಂಬಂಧಿಸಿದಂತೆ ಇವರು ಮಾಡಿದ ಸಂಶೋಧನೆ ಮತ್ತು ಪ್ರಯೋಗಗಳು ಜಾಗತಿಕ ಬಡತನವನ್ನು ಹೋಗಲಾಡಿಸುವಲ್ಲಿ ನೆರವಾಗಿವೆ ಎಂಬ ಕಾರಣಕ್ಕೆ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+