ಪತ್ನಿಯ ಕೊಳೆತ ದೇಹದ ಜೊತೆ ಮೂರು ದಿನ ಕಳೆದ ಪತಿ
ಕೊಲ್ಕತ್ತಾ, ಫೆಬ್ರವರಿ 1: ಪತ್ನಿಯ ಕೊಳೆತ ದೇಹದ ಜೊತೆಗೆ ಪತಿ ಮೂರು ದಿನ ಕಳೆದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಭಾರತಿ ಚಂದ ಎಂಬ ಮಧ್ಯ ವಯಸ್ಕ ಮಹಿಳೆ ಸಾವನ್ನಪ್ಪಿದವರು. ಆಕೆ ಲಿವರ್ ಸಂಬಂಧಿತ ಆರೊಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಡಿಯಾ ಜಿಲ್ಲೆಯ ಚಕ್ಢ್ ನಲ್ಲಿ ಈ ಘಟನೆ ನಡೆದಿದೆ. ಪತ್ತೆಯಾದ ಶವ ಕೊಳೆತು ಹೋಗಿದ್ದು, ಮಹಿಳೆ ಮೃತಪಟ್ಟು ಹಲವು ದಿನಗಳೇ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟ ಭಾರತಿ ಅವರನ್ನು ಕಳೆದ ಸೋಮವಾರ ಕಡೆಯದಾಗಿ ನೋಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕೆಲ ದಿನಗಳ ಕಾಲ ಮನೆಯಿಂದ ಯಾರೂ ಹೊರಬರದ ಕಾರಣ ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.
ಇನ್ನು ಪತಿಯ ಮಾನಸಿಕ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications