ಚೀನೀ ಭಾಷೆಯಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ
ಕೋಲ್ಕತಾ, ಏಪ್ರಿಲ್ 3: ಮತದಾರರನ್ನು ಸೆಳೆಯುವ ಸಲುವಾಗಿ ನಾಯಕರು ಭಾಷೆ, ಧರ್ಮ, ಪ್ರಾದೇಶಿಕ ಭಾವನೆಗಳನ್ನು ಬಳಸುವುದು ಸಾಮಾನ್ಯ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹೊಸ ದಾರಿ ಆಯ್ದುಕೊಂಡಿದ್ದಾರೆ. ಸ್ಥಳಗಳಲ್ಲಿ ಚೀನೀ ಭಾಷೆಯಲ್ಲಿ ಚುನಾವಣಾ ಪ್ರಚಾರದ ಬರಹಗಳನ್ನು ಬರೆಸುವುದು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚೀನಾದ ಮೂಲನಿವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಪೂರ್ವ ಕೋಲ್ಕತಾದ ಚೈನಾಟೌನ್‌ನಲ್ಲಿರುವ ತಂಗ್ರಾ ಎಂಬ ಪ್ರದೇಶದಲ್ಲಿ 'ತೃಣಮೂಲ ಕಾಂಗ್ರೆಸ್‌ಗೆ ಮತ ನೀಡಿ' ಎಂದು ಚೀನೀ ಭಾಷೆಯಲ್ಲಿ ಬರೆಯಲಾಗಿದೆ. ಇಲ್ಲಿನ ಗೋಡೆಗಳಲ್ಲಿ ಚೀನಾ ಭಾಷೆಯ ಮತಪ್ರಚಾರದ ಬರಹಗಳು ರಾರಾಜಿಸುತ್ತಿವೆ.
ಚೀನಾ ಭಾಷಿಕರು ಇಲ್ಲಿ ವಾಸವಿದ್ದು, ಮತದಾನದ ಹಕ್ಕನ್ನು ಹೊಂದಿದ್ದಾರೆ. ಸುಮಾರು 60 ವರ್ಷಗಳ ಹಿಂದೆ ಇಲ್ಲಿನ ಗೋಡೆಗಳಲ್ಲಿ 'ಚೀನಾ ಅಧ್ಯಕ್ಷ ನಮ್ಮ ಅಧ್ಯಕ್ಷ' ಎಂಬ ಬರಹಗಳನ್ನು ಬರೆಯಲಾಗಿತ್ತು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಬಳಿಕ ಚೀನೀ ಭಾಷೆಯ ಬಳಕೆ ಕಂಡುಬಂದಿರಲಿಲ್ಲ ಎನ್ನಲಾಗಿದೆ.

ಈಗ ಮತ್ತೆ ಮಮತಾ ಬ್ಯಾನರ್ಜಿ ಚೀನಾ ಮೂಲದ ಜನರ ಮತ ಸೆಳೆಯಲು ಚೀನೀ ಭಾಷೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಚೀನೀ ಭಾಷೆಯಲ್ಲಿಯೇ ಕರಪತ್ರಗಳನ್ನು ಸಹ ಮುದ್ರಿಸಿದ್ದಾರೆ. ಇಲ್ಲಿನ ಜನರು ಹಿಂದಿ ಮತ್ತು ಬಂಗಾಳಿ ಭಾಷೆಯಲ್ಲಿಯೇ ಹೆಚ್ಚಾಗಿ ವ್ಯವಹರಿಸುತ್ತಾರೆ.
#BJP struggles to find candidates in #Bengal, graffiti shows PM #Modi asking a cow to contest
— #DestroyTheAadhaar (@NanOratoR) 26 March 2019
At present, the @BJP4India has fielded 29 candidates in #WestBengal but seems to be struggling to find candidates for the remaining 13 constituencies. pic.twitter.com/55nsb9R0D2
ಇದಲ್ಲದೆ, ಪಶ್ಚಿಮ ಬಂಗಾಳದಲ್ಲಿ ವಿಡಂಬನೆ ಮಾಡುವ ಚಿತ್ರಗಳನ್ನು ಗೋಡೆಗಳಲ್ಲಿ ಬರೆಸಲಾಗುತ್ತಿದೆ. ಅವುಗಳಲ್ಲಿ ಹೆಚ್ಚು ನರೇಂದ್ರ ಮೋದಿ ಅವರನ್ನು ಲೇವಡಿ ಮಾಡುವ ಚಿತ್ರಗಳೇ ಎಲ್ಲೆಡೆ ಕಾಣಿಸುತ್ತಿವೆ.












Click it and Unblock the Notifications