• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ ಪ್ರಕರಣ; ಕೋಲ್ಕತ್ತಾ ಪೊಲೀಸರಿಂದ ಬಿಜೆಪಿ ನಾಯಕನಿಗೆ ಸಮನ್ಸ್‌

|

ಕೋಲ್ಕತ್ತಾ, ಫೆಬ್ರವರಿ 23: ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದಿದ್ದ ಪಶ್ಚಿಮ ಬಂಗಾಳ ಬಿಜೆಪಿ ಯುವ ಘಟಕದ ನಾಯಕಿ ಪಮೇಲಾ ಗೋಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಲಾಶ್ ವಿಜಯ ವರ್ಗಿಯಾ ಸಹಾಯಕ ಹಾಗೂ ಬಿಜೆಪಿ ನಾಯಕ ರಾಕೇಶ್ ಸಿಂಗ್‌ಗೆ ಕೋಲ್ಕತ್ತಾ ಪೊಲೀಸರು ಸಮನ್ಸ್‌ ನೀಡಿದ್ದಾರೆ.

ಕಳೆದ ಶುಕ್ರವಾರ ಪಮೇಲಾ ಗೋಸ್ವಾಮಿ ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದಿದ್ದು, ಕಾರ್‌ನಲ್ಲಿದ್ದ ಸುಮಾರು 10 ಲಕ್ಷ ರೂ ಮೌಲ್ಯದ 90 ಗ್ರಾಂ ಕೊಕೇನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಡ್ರಗ್ಸ್ ಸಾಗಿಸುವಾಗ ಸಿಕ್ಕಿಬಿದ್ದ ಬಿಜೆಪಿ ಯುವ ನಾಯಕಿ!

ಪಮೇಲಾ ಗೋಸ್ವಾಮಿ ಅವರನ್ನು ಶನಿವಾರ ಕೋಲ್ಕತ್ತಾದ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ವಿಚಾರಣೆ ವೇಳೆ, "ಇದು ನನ್ನ ವಿರುದ್ಧದ ಸಂಚು. ಇದರಲ್ಲಿ ಪಕ್ಷದ ಸಹೋದ್ಯೋಗಿ ಹಾಗೂ ಕೈಲಾಶ್ ವಿಜಯ ವರ್ಗಿಯಾ ಸಹಾಯಕ ರಾಕೇಶ್ ಸಿಂಗ್ ಹುನ್ನಾರವಿದೆ. ಅವರೇ ಕಾರಿನಲ್ಲಿ ಕೊಕೇನ್‌ಗಳನ್ನು ಇರಿಸಿದ್ದಾರೆ. ಐದು ದಿನಗಳ ಹಿಂದೆ ಮಾತನಾಡಿದ ಆಡಿಯೋ ಕೂಡ ನನ್ನ ಬಳಿ ಇದೆ" ಎಂದು ತಿಳಿಸಿದ್ದರು.

ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸಬೇಕು ಎಂದು ಕೇಳಿಕೊಂಡಿದ್ದರು.

ಈ ಆರೋಪ ಅಲ್ಲಗಳೆದಿದ್ದ ರಾಕೇಶ್ ಸಿಂಗ್, "ಇದು ನನಗೆ ಅಪಖ್ಯಾತಿ ತರುವ ಹುನ್ನಾರವಷ್ಟೆ. ಇಂಥ ಕೆಟ್ಟ ರಾಜಕೀಯವನ್ನು ನಾನು ನಂಬುವುದಿಲ್ಲ" ಎಂದು ಹೇಳಿದ್ದರು. ತನಿಖೆಗೆ ತಾವು ಸಿದ್ಧವಿರುವುದಾಗಿ ಪೊಲೀಸ್ ಆಯುಕ್ತರಾದ ಸೌಮೆನ್ ಮಿತ್ರಾಗೆ ಪತ್ರ ಬರೆದಿದ್ದರು.

ಈ ಬೆನ್ನಲ್ಲೇ ಕೋಲ್ಕತ್ತಾ ಪೊಲೀಸರು ರಾಕೇಶ್‌ ಸಿಂಗ್‌ಗೆ ಸಮನ್ಸ್‌ ಹೊರಡಿಸಿದ್ದಾರೆ. ಮಂಗಳವಾರವೇ ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

English summary
Kolkata Police issued summons to BJP leader Rakesh Singh in connection with Pamela Goswami drug seizure case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X