ಮಮತಾ ಬ್ಯಾನರ್ಜಿಯ ಮತ್ತೊಬ್ಬ ಆಪ್ತನನ್ನು ಸೆಳೆದ ಬಿಜೆಪಿ

ಕೊಲ್ಕತ್ತ, ಆಗಸ್ಟ್ 15: ಕೊಲ್ಕತ್ತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮತ್ತೊಬ್ಬ ಆಪ್ತನನ್ನು ಬಿಜೆಪಿ ಸೆಳೆದಿದೆ.

ಲೋಕಸಭಾ ಚುನಾವಣೆ ತಯಾರಿಗಾಗಿ ಮಮತಾ ದೀದಿಯ ಪರಮಾಪ್ತ ಹಾಗೂ ಟಿಎಂಸಿಯ ಅಗ್ರಗಣ್ಯ ನಾಯಕರಾಗಿದ್ದ ಮುಕುಲ್ ರಾಯ್‌ ಅವರನ್ನು ಬಿಜೆಪಿ ಸೆಳೆದಿತ್ತು. ಈಗ ಸೋವನ್ ಚಟರ್ಜಿಯವರನ್ನು ತನ್ನತ್ತ ಸೆಳೆದಿದೆ.

ಸೋವನ್​ ಚಟರ್ಜಿ ಎರಡು ಬಾರಿ ಕೊಲ್ಕತ್ತ ಮೇಯರ್​ ಆಗಿದ್ದರು. ಮತ್ತು ಮಮತಾ ಬ್ಯಾನರ್ಜಿ ಅವರಿಗೆ ಅತ್ಯಾಪ್ತರಾಗಿದ್ದವರು. ಅಷ್ಟೇ ಅಲ್ಲದೇ, ತೃಣಮೂಲ ಕಾಂಗ್ರೆಸ್​ ಆರಂಭದಿಂದ ಜೊತೆಗೆ ಇದ್ದವರು.

Kolkata Former Mayor Joins BJP

2017ರಲ್ಲಿ ಪತ್ರಕರ್ತರು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸೋವನ್​ ಚಟರ್ಜಿ ಹಣ ಪಡೆದ ನಾರಾದ ಸ್ಟಿಂಗ್​ ಆಪರೇಷನ್​ನಲ್ಲಿ ಸಿಕ್ಕಿಬಿದ್ದಿದ್ದರಿಂದ ಇ.ಡಿ. ಮತ್ತು ಸಿಬಿಐ ಸಮನ್ಸ್​ ನೀಡಿತ್ತು.

ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬಳಿಕ ಆರು ಮಂದಿ ಟಿಎಂಸಿ ಶಾಸಕರು, ಕಾಂಗ್ರೆಸ್​ - ಸಿಪಿಐಎಂನಿಂದ ಒಬ್ಬರಂತೆ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಧಿಕಾರ ಗದ್ದುಗೆಗೇರಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಅದಕ್ಕಾಗಿಯೇ ಬೇರೆ ಪಕ್ಷಗಳಿಂದ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ.

ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಹುದ್ದೆಗೇರಲು ನಾನು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಈಗ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟಪಡುತ್ತೇನೆ. ಟಿಎಂಸಿ ಮುಂದಿನ ಬಾರಿ ಅಧಿಕೃತ ವಿರೋಧ ಪಕ್ಷವಾಗಿಯೂ ಉಳಿಯಲು ಸಾಧ್ಯವಿಲ್ಲ ಎಂದು ಮುಕುಲ್ ರಾಯ್ ಅಭಿಪ್ರಾಯ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+