ಸೀರೆಯನ್ನುಟ್ಟು ಪಲ್ಟಿ ಹೊಡೆದು ಡ್ಯಾನ್ಸ್ ಮಾಡಿದ ಬಂಗಾಳದ ಹುಡುಗಿ

ಕೊಲ್ಕತ್ತ ಏಪ್ರಿಲ್ 11: ಸೀರೆ ಅಂದರೆ ಗೊಂದಲ, ಹಾಕುವುದು ಕಷ್ಟ, ನಡೆಯುವುದು ಕಷ್ಟ, ಕಿರಿಕಿರಿ ಎನ್ನುವ ಮಹಿಳೆಯರು ನಮ್ಮ ನಡುವೆ ಇದ್ದಾರೆ. ಆದರೆ ಒಣಕೆ ಹಿಡಿದ ಓಬವ್ವ, ಖಡ್ಗ ಹಿಡಿದು ಹೋರಾಡಿದ ಕಿತ್ತೂರ ರಾಣಿ ಚೆನ್ನಮ್ಮ ಹೀಗೆ ಅನೇಕ ಹೋರಾಟಗಾರ್ತಿಯರು ಸೀರೆಯನ್ನುಟ್ಟೇ ಯುದ್ಧದಲ್ಲಿ ಗೆಲುವಿನ ಪಣತೊಟ್ಟು ನಿಂತಿವುರುದನ್ನು ನಾವು ಇತಿಹಾಸದುದ್ದಕ್ಕೂ ನೋಡುತ್ತೇವೆ. ಸೀರೆ ನಮ್ಮ ಸಾಂಪ್ರದಾಯಕ ಉಡುಗೆ. ಹೆಣ್ಣಿಗೆ ಅನ್ಯರಿಂದ ಗೌರವದ ಮನೋಭಾವ ಮೂಡಿಸುವುದರಲ್ಲಿ ಸೀರೆಯ ಪಾತ್ರ ಮಹತ್ವದ್ದಾಗಿದೆ. ಇದೆಲ್ಲದರ ನಡುವೆ ಇಂದಿನ ಕಾಲದ ಹುಡುಗಿಯರು ಸೀರೆಯನ್ನುಟ್ಟೇ ಹಲವಾರು ಕಸರತ್ತು ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಹೀಗೊಂದು ವಿಡಿಯೋದಲ್ಲಿ ಬಂಗಾಳದ ಹುಡುಗಿಯೊಬ್ಬಳು ಸೀರೆಯಲ್ಲಿ ಪಲ್ಟಿ ಹೊಡೆದು ಡ್ಯಾನ್ಸ್ ಮಾಡಿದ್ದು ವೈರಲ್ ಆಗಿದೆ.

ಪಶ್ಚಿಮ ಬಂಗಾಳದ ರಾಯಗಂಜ್‌ನ ಮಿಲಿ ಸರ್ಕಾರ್ ವೃತ್ತಿಪರ ನೃತ್ಯಗಾರ್ತಿ ಮತ್ತು ಜಿಮ್ನಾಸ್ಟ್. ಅವರು ಆಗಾಗ್ಗೆ ಬ್ಯಾಕ್‌ಫ್ಲಿಪ್‌ಗಳು ಮತ್ತು ಇತರ ಜಿಮ್ನಾಸ್ಟಿಕ್ ಚಲನೆಗಳನ್ನು ಪ್ರದರ್ಶಿಸುವ ವೀಡಿಯೊಗಳನ್ನು Instagram ನಲ್ಲಿ ಪೋಸ್ಟ್ ಮಾಡುತ್ತಾರೆ. ಆಕೆಯ ಚಮತ್ಕಾರಿಕ ಕೌಶಲ್ಯಗಳು ಸಾಮಾನ್ಯವಾಗಿ ನೆಟಿಜನ್‌ಗಳನ್ನು ಬೆರಗುಗೊಳಿಸುತ್ತವೆ. ಇತ್ತೀಚಿನ ವಿಡಿಯೊದಲ್ಲಿ, ಬಂಗಾಳದ ಹುಡುಗಿ ಸೀರೆಯಲ್ಲಿ ಬ್ಯಾಕ್‌ಫ್ಲಿಪ್ ಮಾಡುತ್ತಿರುವುದು ಕಂಡುಬಂದಿದೆ. ಏಪ್ರಿಲ್ 2 ರಂದು ತನ್ನ Instagram ಖಾತೆಯಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, 26,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಈ ವಿಡಿಯೋ ಹೊಂದಿದೆ. ಮಿಲಿ ಅವರ Instagram ಹ್ಯಾಂಡಲ್ 198k ಅನುಯಾಯಿಗಳನ್ನು ಹೊಂದಿದೆ.

ಈಗ ವೈರಲ್ ಆಗಿರುವ ವಿಡಿಯೊದಲ್ಲಿ, ಮಿಲಿ ಸರ್ಕಾರ್ ಸೀರೆಯಲ್ಲಿ ತುಂಬಾ ಸುಲಭವಾಗಿ ಬ್ಯಾಕ್‌ಫ್ಲಿಪ್ ಮಾಡುವುದನ್ನು ಕಾಣಬಹುದು. ಜಿಮ್ನಾಸ್ಟಿಕ್ ಭಂಗಿಯನ್ನು ಬ್ಯಾಕ್‌ಫ್ಲಿಪ್ ಮಾಡಿದ ನಂತರ ಅವರು ಸ್ವಲ್ಪ ನೃತ್ಯದಲ್ಲಿ ತೊಡಗುತ್ತಾರೆ. "ಸೀರೆಯಲ್ಲಿ ನೃತ್ಯ" ಎನ್ನುವ ಶೀರ್ಷಿಕೆಯೊಂದಿಗೆ ವಿಡಿಯೋ ವೈರಲ್ ಆಗಿದೆ.

Girl Performs A Backflip & Dances While Wearing Saree; Video Goes Viral

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

ಇವರ ಅದ್ಬುತ ಕೌಶಲ್ಯಕ್ಕೆ ಮಾರು ಹೋದ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕಾಮೆಂಟ್‌ಗಳ ವಿಭಾಗವು ಹೃದಯ ಮತ್ತು ಪ್ರೀತಿಯ ಎಮೋಜಿಗಳಿಂದ ತುಂಬಿದೆ. ಮಿಲಿ ಸರ್ಕಾರ್ ಕಾರ್ಟ್‌ವೀಲ್‌ಗಳು ಮತ್ತು ಹಲವಾರು ಇತರ ಜಿಮ್ನಾಸ್ಟಿಕ್ ಭಂಗಿಗಳನ್ನು ಪ್ರದರ್ಶಿಸುವ ಇನ್ನೂ ಕೆಲವು ವೀಡಿಯೊಗಳು ಇಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+