ಕೋಲ್ಕತ್ತಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 250 ರೋಗಿಗಳು ಶಿಫ್ಟ್
Recommended Video

ಕೋಲ್ಕತ್ತ, ಅ.3: ಕೋಲ್ಕತ್ತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 550 ರೋಗಿಗಳನ್ನು ಸ್ಥಳಾಂತರಿಸಲಾಗಿದೆ.
ಔಷಧಾಲಯದ ವಿಭಾಗದ ಸುತ್ತ ಬೆಳಗ್ಗೆ 7.30ರ ಸಮಯದಲ್ಲಿಬೆಂಕಿ ಕಾಣಿಸಿಕೊಂಡಿದೆ, ಹೊಗೆ ಕಂಡು ಬಂದಾಗ ಆಸ್ಪತ್ರೆ ನಿರ್ವಹಣಾ ವಿಭಾಗದ ಎಚ್ಚರಿಕೆ ನೀಡಿತ್ತು ಬಳಿಕ ದಟ್ಟ ಹೊಗೆ ಆಸ್ಪತ್ರೆ ತುಂಬೆಲ್ಲಾ ಆವರಿಸಿಕೊಂಡಿತ್ತು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಲಾಯಿತು, ಬಳಿಕ ವಿಪತ್ತು ನಿರ್ವಹಣಾ ತಂಡ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನ ನಡೆದಿದೆ.
ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ 250ಕ್ಕೂ ಹೆಚ್ಚು ರೋಗಿಗಳನ್ನು ಸ್ಟ್ರೆಚರ್ ಮೂಲಕ ಬೇರೆಡೆಗೆ ಸ್ಥಳಾಂತರಿಸಲಾಗಿದೆ, ಕೋಲ್ಕತ ವೈದ್ಯಕೀಯ ಕಾಲೇಜು ಸಂಕೀರ್ಣದಲ್ಲಿ ಹಲವು ಕಟ್ಟಡಗಳಿವೆ.ಕೋಲ್ಕತ್ತ ವೈದ್ಯಕೀಯ ಕಾಲೇಜು ಭಾರತದಲ್ಲೇ ಅತ್ಯಂತ ಹಳೆಯ ಆಸ್ಪತ್ರೆಯಾಗಿದೆ.

ಡಿಸೆಂಬರ್ 2011ರಲ್ಲಿ ಕೋಲ್ಕತ್ತದ ಎಎಂಆರ್ ಐ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ 92 ಮಂದಿ ಮೃತಪಟ್ಟಿದ್ದರು.












Click it and Unblock the Notifications