ಫೆ.15ರಿಂದ ಕೋಲಾರದ ವಿಸ್ಟ್ರಾನ್ ಘಟಕ ಆರಂಭ

ಕೋಲಾರ, ಫೆಬ್ರವರಿ 10: ಹೊಸ ನೇಮಕಾತಿ ನಿಯಮ, ಎಲ್ಲಾ ಉದ್ಯೋಗಿಗಳಿಗೂ ಪೂರ್ಣ ವೇತನ ನೀಡುವ ಮೂಲಕ ಪುನಃ ಘಟಕದಲ್ಲಿ ತಯಾರಿಕೆ ಆರಂಭಿಸಲಾಗುತ್ತದೆ ಎಂದು ಕೋಲಾರದ ವಿಸ್ಟ್ರಾನ್ ಘಟಕ ಹೇಳಿದೆ.

ವಿಸ್ಟ್ರಾನ್ ಸ್ಮಾರ್ಟ್ ಡಿವೈಸಸ್‌ನ ಸಿಇಓ ಡೇವಿಡ್ ಶೇನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 12ರಂದು ನಡೆದ ಗಲಭೆ ಬಳಿಕ ಘಟಕದಲ್ಲಿ ಪುನಃ ಶೀಘ್ರದಲ್ಲೇ ತಯಾರಿಕೆ ಆರಂಭ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

"ನಾವು ಘಟಕದಲ್ಲಿ ತಯಾರಿಕೆಯನ್ನು ಪುನಃ ಆರಂಭಿಸಲಿದ್ದೇವೆ. ನಾವು ಉದ್ಯೋಗಿಗಳನ್ನು ವಾಪಸ್ ಕರೆಸಿಕೊಳ್ಳಲಿದ್ದೇವೆ. ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದೆ" ಎಂದು ಡೇವಿಡ್ ಶೇನ್ ತಿಳಿಸಿದ್ದಾರೆ.

Wistron Says Its Operations To Resume Soon In Kolar Plant

ಹೊಸ ನೇಮಕಾತಿ ನಿಯಮ, ಉದ್ಯೋಗಿಗಳಿಗೆ ಪೂರ್ಣ ವೇತನವನ್ನು ನೀಡಲಾಗುತ್ತದೆ. ಎಲ್ಲಾ ಉದ್ಯೋಗಿಗಳಿಗೆ ತರಬೇತಿಯನ್ನು ನೀಡಲು ವಿಸ್ಟ್ರಾನ್ ತೀರ್ಮಾನಿಸಿದೆ. ಫೆಬ್ರವರಿ 15ರಂದು ವಿಸ್ಟ್ರಾನ್ ಘಟಕ ಪುನಃ ಆರಂಭಗೊಳ್ಳುವ ನಿರೀಕ್ಷೆ ಇದೆ.

2020ರ ಡಿಸೆಂಬರ್ 11ರ ಶುಕ್ರವಾರ ಸಂಜೆಯಿಂದ ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಘಟಕದಲ್ಲಿ ವೇತನ ವಿಚಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಹಾಗೂ ಆಡಳಿತ ಮಂಡಳಿಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು.

ಡಿಸೆಂಬರ್ 12ರ ಶನಿವಾರ ಮುಂಜಾನೆ ಅದು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಗುತ್ತಿಗೆ ನೌಕರರು ಕಾರುಗಳಿಗೆ ಬೆಂಕಿ ಹಚ್ಚಿದರು, ಪಿಠೋಪಕರಣ ಧ್ವಂಸ ಮಾಡಲಾಯಿತು, ಕಂಪ್ಯೂಟರ್‌ಗಳನ್ನು ಒಡೆದು ಹಾಕಲಾಯಿತು. ನೌಕರರ ದಾಂಧಲೆಯಿಂದಾಗಿ ಸುಮಾರು 437 ಕೋಟಿ ರೂ.ಗಳಿಗೆ ಅಧಿಕ ನಷ್ಟವಾಗಿದೆ.

ವಿಸ್ಟ್ರಾನ್ ಘಟಕದಲ್ಲಿ ನಡದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 300ಕ್ಕೂ ಅಧಿಕ ಉದ್ಯೋಗಿಗಳನ್ನು ವಶಕ್ಕೆ ಪಡೆಯಲಾಗಿತ್ತು. ವೇಮಗಲ್ ಠಾಣೆ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ತನಿಖೆ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+