Koppal Lok Sabha Constituency: ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಯಾರಿಗೆ?, ಇಲ್ಲಿದೆ ಮಾಹಿತಿ
ಕೊಪ್ಪಳ, ಮಾರ್ಚ್, 13: ಲೋಕಸಭೆ ಸಮರಕ್ಕಾಗಿ ಈಗಾಗಲೇ ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಇಂದು (ಮಾರ್ಚ್ 13) ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಬಾರಿ ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಿದೆ. ಹಾಗಾದರೆ ಆ ಅಭ್ಯರ್ಥಿ ಯಾರು ಹಾಗೂ ಅವರ ಹಿನ್ನೆಲೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಇದರಲ್ಲಿ ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಈ ಪೈಕಿ ಕೊಪ್ಪಳ ಕ್ಷೇತ್ರದಿಂದ ಹೊಸ ಮುಖ ಡಾ.ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

ಇನ್ನು ಕಳೆದ ಎರಡು ಅವಧಿಗೆ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಈ ಬಾರಿಯೂ ಕೂಡ ಸಂಗಣ್ಣ ಅವರು ಟಿಕೆಟ್ ಕೊಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ.
ಇನ್ನು 2019ರಲ್ಲೇ ಡಾ.ಬಸವರಾಜ ಕೆ ಅವರು ಎಂಪಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರು. ಆದರೆ ಆಗ ಕೈ ತಪ್ಪಿತ್ತು. ಆದರೆ ಈ ಬಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಡಾ.ಬಸವರಾಜ ಹೊಸ ಮುಖ ಆಗಿದ್ದರೂ ಕೂಡ ಅವರ ಕುಟುಂಬವು ರಾಜಕಾರಣದಲ್ಲಿದ್ದು, ಅವರ ತಂದೆ ಕೆ.ಶರಣಪ್ಪ ಅವರು ಜೆಡಿಎಸ್‌ನಿಂದ ಹಿಂದೊಮ್ಮೆ ಶಾಸಕರಾಗಿದ್ದು, ಈಗ ಅವರು ಬಿಜೆಪಿಯಲ್ಲಿದ್ದಾರೆ. ಇನ್ನು ಹಾಲಿ ಸಂಸದ ಸಂಗಣ್ಣ ಕರಡಿ ಅವರ ಮುಂದಿನ ನಡೆಯನ್ನು ಕಾದುನೋಡಬೇಕಿದೆ.
ಕಳೆದ ಚುನಾವಣೆಯಲ್ಲಿ ಶೇ.66 ರಷ್ಟು ಜನರು ಮತ ಚಲಾವಣೆ ಮಾಡಿದ್ದರು. ಈ ಕ್ಷೇತ್ರದಲ್ಲಿ ಒಟ್ಟು 21,87,977 ಜನಸಂಖ್ಯೆಯಿದ್ದು, ಶೇ.82.25%ರಷ್ಟು ಗ್ರಾಮೀಣ ಮತ್ತು ಶೇ.17.75% ರಷ್ಟು ನಗರ ಜನಸಂಖ್ಯೆಯಿದೆ.












Click it and Unblock the Notifications