ಕೆಎಚ್ ಮುನಿಯಪ್ಪ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ರಿಂದ ಎಂಥ ಮಾತು!
ಕೋಲಾರ, ಮಾರ್ಚ್ 21: ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಗುರುವಾರ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ಈಗಾಗಲೇ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಇರುವುದು ಗೊತ್ತಿರುವ ವಿಚಾರವೇ. ಆ ಬಗ್ಗೆ ಮುನಿಯಪ್ಪ ಈಚೆಗೆ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ರಮೇಶ್ ಕುಮಾರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
"ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ನನ್ನ ಪಕ್ಕದಲ್ಲಿ ಮಲಗಲು ಇಷ್ಟ ಇರಬಹುದು. ಆದರೆ ನಾನು ಗಂಡಸರ ಜತೆ ಮಲಗಲ್ಲ" ಎಂದಿದ್ದಾರೆ ರಮೇಶ್ ಕುಮಾರ್. ಈಚೆಗಷ್ಟೇ ಮುನಿಯಪ್ಪ ಮಾತನಾಡುತ್ತಾ, ನಾನು ಹಾಗೂ ರಮೇಶ್ ಕುಮಾರ್ ಗಂಡ-ಹೆಂಡತಿ ಇದ್ದ ಹಾಗೆ. ದಂಪತಿಯಂತೆ ನಾವು ಜಗಳ ಆಡುತ್ತಲೇ ಇರ್ತೀವಿ. ಆದರೆ ಸಂಜೆ ಎಲ್ಲವೂ ಸರಿಹೋಗಿ ಒಂದಾಗ್ತೀವಿ ಎಂದಿದ್ದರು.
ನನಗೆ ಮದುವೆ ಆದ ಪತ್ನಿ ಜತೆಗೆ ಮಾತ್ರ ಸಂಬಂಧ ಇದೆ. ಆದ್ದರಿಂದ ನನ್ನ್ ಮನೆಗೇ ಹೋಗಿ ಮಲಗ್ತೀನಿ ಎಂದು ಖಾರವಾಗಿ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಏಳು ಬಾರಿ ಸಂಸದರಾಗಿರುವ ಮುನಿಯಪ್ಪ ಅವರಿಗೆ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ ನಲ್ಲೇ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮದವರಿಗೆ, ನನ್ನ ಮನಸಿನಲ್ಲಿ ಇರುವುದನ್ನು ಹೇಳುವುದಕ್ಕೆ ಆಗುವುದಿಲ್ಲ ಎಂದು ರಮೇಶ್ ಕುಮಾರ್ ಉತ್ತರ ನೀಡಿದ್ದಾರೆ.












Click it and Unblock the Notifications