ಲಾಕ್ ಡೌನ್ ಮುಂದುವರಿಕೆ; ಹೃದಯಾಘಾತದಿಂದ ಕೋಲಾರ ವ್ಯಕ್ತಿ ಸಾವು
ಕೋಲಾರ, ಏಪ್ರಿಲ್ 15: ಕೋಲಾರದಲ್ಲಿ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಲಾಕ್ ಡೌನ್ ಮುಂದುವರೆದ ವಿಚಾರ ತಿಳಿದು ಹೃದಯಾಘಾತ ಸಂಭವಿಸಿರುವುದಾಗಿ ಮೃತನ ಸಂಬಂಧಿಕರು ತಿಳಿಸಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿಯ ನಿವಾಸಿ ಮುರುಗೇಶ್ (48) ಹೃದಯಾಘಾತದಿಂದ ಮೃತಪಟ್ಟವರು. ಮುರುಗೇಶ್, ನಿನ್ನೆ ಟಿ.ವಿ. ನೋಡುತ್ತಾ ಕುಳಿತುಕೊಂಡಿದ್ದರು. ಲಾಕ್ ಡೌನ್ ಕುರಿತು ಸುದ್ದಿ ನೋಡುತ್ತಿದ್ದ ಅವರು, ಟಿ.ವಿ ನೋಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಮುರುಗೇಶ್ ಗೆ ನಾಲ್ಕು ಹೆಣ್ಣು ಮಕ್ಕಳಿದ್ದರು. ಬಡತನ, ಮಕ್ಕಳ ಚಿಂತೆಯಲ್ಲಿದ್ದ ಮುರುಗೇಶ್, ಲಾಕ್ ಡೌನ್ ಮುಂದುವರೆದರೆ ಕಷ್ಟ ಎಂದು ಸಂಬಂಧಿಗಳ ಬಳಿಯೂ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












Click it and Unblock the Notifications