ಮಗನಿಗೆ ಕೊರೊನಾ; ಕೋಲಾರದಲ್ಲಿ ಹೃದಯಾಘಾತದಿಂದ ತಾಯಿ ಸಾವು
ಕೋಲಾರ, ಜುಲೈ 30: ಕೋಲಾರ ಜಿಲ್ಲೆಯಲ್ಲೂ ಕೊರೊನಾ ವೈರಸ್ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ನಡುವೆ ಮಗನಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವಿಷಯ ತಿಳಿದು ತಾಯಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.
Recommended Video
Hardik Pandya And Natasa Stankovic Blessed With A Baby Boy | Oneindia Kannada
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ 42 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗನಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಚಿಂತೆಯಲ್ಲಿದ್ದ ಅವರ 65 ವರ್ಷದ ತಾಯಿಗೆ ನಿನ್ನೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.

ಮಗನಿಗೆ ಸೋಂಕು ತಗುಲಿರುವ ಕುರಿತು ಅವರು ಮನನೊಂದು ಚಿಂತೆಯಲ್ಲಿದ್ದರು ಎಂದು ತಿಳಿದುಬಂದಿದೆ. ವೃದ್ಧೆಯ ಅಂತ್ಯಸಂಸ್ಕಾರ ನಿನ್ನೆ ಸಂಜೆ ನೆರವೇರಿದ್ದು, ಸೋಂಕಿತ ಮಗ ಅಂತ್ಯಸಂಸ್ಕಾರದಲ್ಲೂ ಭಾಗವಹಿಸಲು ಸಾಧ್ಯವಾಗಲಿಲ್ಲ.












Click it and Unblock the Notifications