ಉಗ್ರರೊಂದಿಗಿನ ಕಾದಾಟದಲ್ಲಿ ಕೋಲಾರ ಯೋಧ ಹುತಾತ್ಮ
ಕೋಲಾರ, ಫೆಬ್ರವರಿ 27: ಕೋಲಾರ ಮೂಲದ ಯೋಧ ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಉಗ್ರರು ಹಾಗೂ ಯೋಧರ ನಡುವೆ ನಡೆದ ಚಕಮಕಿಯಲ್ಲಿ ಯೋಧ ಪ್ರಶಾಂತ್ ಹುತಾತ್ಮರಾಗಿದ್ದಾರೆ.
ಕೋಲಾರ ಮೂಲದ ಯೋಧ ಜಮ್ಮುವಿನಲ್ಲಿ ಹುತಾತ್ಮರಾಗಿದ್ದು, ಇವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಣಿಂಬೆಲೆ ಗ್ರಾಮದವರು. 17 ಮದ್ರಾಸ್ ರೆಜಿಮೆಂಟ್ ನ ಪ್ರಶಾಂತ್ (25) ಹುತಾತ್ಮ ಯೋಧ.

ನಿನ್ನೆ ಸಂಜೆ ಜಮ್ಮು- ಕಾಶ್ಮೀರದಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧ ಪ್ರಶಾಂತ್ ಈಗಾಗಲೇ ತಂದೆಯನ್ನು ಕಳೆದುಕೊಂಡಿದ್ದರು. ನಾಳೆ ಬಂಗಾರಪೇಟೆಯ ಸ್ವಗ್ರಾಮ ಕಣಿಂಬೆಲೆಗೆ ಹುತಾತ್ಮ ಪ್ರಶಾಂತ್ ಪಾರ್ಥಿವ ಶರೀರ ತಲುಪಲಿದೆ.












Click it and Unblock the Notifications