• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಜೆ ಪಡೆದು ಜೂಜು ಅಡುತ್ತಿದ್ದ ಕೋಲಾರ ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಅರೆಸ್ಟ್

|
Google Oneindia Kannada News

ಬೆಂಗಳೂರು, ಆ. 22: ರಜೆ ಮೇಲೆ ರಾಜಸ್ಥಾನಕ್ಕೆ ಹೋಗಿದ್ದ ಕೋಲಾರ ಸೈಬರ್ ಕ್ರೈಂ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ರಾಜಸ್ಥಾನದ ಜೂಜು ಅಡ್ಡೆಯಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ.

ಕೋಲಾರ ಸೈಬರ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆಂಜಿನಪ್ಪ ಬಂಧನಕ್ಕೆ ಒಳಗಾದ ಪೊಲೀಸ್ ಅಧಿಕಾರಿ. ಈತನೊಂದಿಗೆ ಟೊಮೆಟೋ ವ್ಯಾಪಾರಿ ಸುಧಾಕರ್, ನಾಮ ನಿರ್ದೇಶಿತ ನಗರಸಭೆ ಸದಸ್ಯ ಸತೀಶ್, ಸಬ್ ರಿಜಿಸ್ಟ್ರಾರ್ ಶ್ರೀನಾಥ್, ಉಪನ್ಯಾಸಕ ರಮೇಶ್, ಅರ್‌ಟಿಓ ಸಿಬ್ಬಂದಿ ಶಭರೀಶ್ ಅಂಜಿನಪ್ಪ ಕೂಡಾ ಬಂಧನಕ್ಕೆ ಒಳಗಾದವರು.

ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: 22 ಶಾಲೆಗಳಿಗೆ ರಜೆ ಘೋಷಣೆ ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: 22 ಶಾಲೆಗಳಿಗೆ ರಜೆ ಘೋಷಣೆ

ಮೂರು ದಿನ ರಜೆ ಪಡೆದು ರಾಜಸ್ಥಾನಕ್ಕೆ ತೆರಳಿದ್ದ ಆಂಜಿನಪ್ಪ ತಮ್ಮ ಪಟಾಲಂ ಜತೆ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಇಸ್ಪೀಟ್ ದಂಧೆಯಲ್ಲಿ ಅಂದರ್ ಬಾಹರ್ ಅಡುತ್ತಿದ್ದರು.ಖಚಿತ ಮಾಹಿತಿ ಮೇರೆಗೆ ಜೈಪುರದ ಜೈಸಿಂಗೇಪುರ ಖೋರ್ ಪೊಲೀಸರು ಸಾಯಿಪುರ್ ಬಾಗ್ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಜೂಜಾಟ ಅಡುತ್ತಿದ್ದ 84 ಮಂದಿಯನ್ನು ಬಂಧಿಸಿದ್ದು, ಕೋಲಾರ ಜಿಲ್ಲೆ ಸೈಬರ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಕೂಡ ಸಿಕ್ಕಿಬಿದ್ದಿದ್ದಾರೆ. ಆಂಜಿನಪ್ಪ ಜತೆಗಿದ್ದವರನ್ನು ವಿಚಾರಣೆ ನಡೆಸಿದಾಗ ಆರ್‌ಟಿಓ, ಉಪ ನೋಂದಣಾಧಿಕಾರಿ, ಟೊಮೆಟೋ ವ್ಯಾಪಾರಿ, ನಗರಸಭೆ ಸದಸ್ಯ ಎಲ್ಲರೂ ಸಿಕ್ಕಿಬಿದ್ದಿದ್ದಾರೆ.

ಪೊಲೀಸಪ್ಪನೇ ಜೂಜು ಅಡ್ಡೆಯಲ್ಲಿ ಸಿಕ್ಕಿಬಿದ್ದಿರುವುದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಜೂಜು ತಡೆಯಬೇಕಾದ ಆಂಜಿನಪ್ಪ ಅವರೇ ಜೂಜು ಅಡ್ಡೆಯಲ್ಲಿ ಸಿಕ್ಕಿಬಿದ್ದಿರುವುದು ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆ ಆಗುತ್ತಿದೆ.

English summary
Andar Bahar betting game: Rajasthan Jaipur police have been arrested Kolar cyber police station inspector Anjinappa along with some govt servants. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X