• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶೇಷ ವರದಿ: ಕೋಲಾರ ಎಪಿಎಂಸಿ ಅನ್‌ಲಾಕ್; ರೈತರಲ್ಲಿ ಮಂದಹಾಸ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜೂನ್ 22: ಕಳೆದ ಒಂದೂವರೆ ತಿಂಗಳಿನಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆಗಿದ್ದ ಕೋಲಾರ ಜಿಲ್ಲೆಯಲ್ಲಿ ಇದೀಗ ಅನ್‌ಲಾಕ್ ಆಗಿದೆ. ಇದರ ಬೆನ್ನಲ್ಲೇ ಪಾತಾಳಕ್ಕೆ ಕುಸಿದು ಬಿದ್ದಿದ್ದ ಟೊಮೆಟೊ ಬೆಲೆ ಈಗ ಕೊಂಚ ಚೇತರಿಕೆ ಕಾಣುತ್ತಿದೆ. ಸದ್ಯ ಟೊಮೆಟೊ ವ್ಯಾಪಾರಸ್ಥರು, ಖರೀದಿದಾರರು ಮಾರುಕಟ್ಟೆಯತ್ತ ಮುಖ ಮಾಡಿದ್ದು, ರೈತರು ಮತ್ತು ಮಂಡಿ ಮಾಲೀಕರ ಆಶಾಭಾವನೆಗೆ ಕಾರಣವಾಗಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ...

ದರ ಕುಸಿತವಾಗಿ ರೈತರು ಕಂಗಾಲಾಗಿದ್ದರು

ದರ ಕುಸಿತವಾಗಿ ರೈತರು ಕಂಗಾಲಾಗಿದ್ದರು

ಮಾರುಕಟ್ಟೆಯ ಆವರಣದಲ್ಲಿ ಎಲ್ಲಿ ನೋಡಿದರೂ ಟೊಮೆಟೊ... ಟೊಮೆಟೊ. ಯಾವಾಗಲೂ ಗಿಜಿಗುಟ್ಟುತ್ತಿರುವ ಮಾರುಕಟ್ಟೆ ಆವರಣ. ಮಾರುಕಟ್ಟೆ ಸುತ್ತಮುತ್ತ ಬಂದು ಬೀಡು ಬಿಟ್ಟಿರುವ ಹೊರ ರಾಜ್ಯಗಳ ದೊಡ್ಡ ದೊಡ್ಡ ಟ್ರಕ್‌ಗಳು. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ. ಏಷ್ಯಾದಲ್ಲೇ ಎರಡನೇ ದೊಡ್ಡ ಟೊಮೆಟೊ ಮಾರುಕಟ್ಟೆ ಅನ್ನುವ ಹೆಗ್ಗಳಿಕೆ ಹೊಂದಿರುವ ಕೋಲಾರದ ಈ ಎಪಿಎಂಸಿ ಮಾರುಕಟ್ಟೆ, ಕೊರೊನಾ ಎರಡನೇ ಅಲೆ ಪರಿಣಾಮದಿಂದ ಕಳೆದ ಒಂದೂವರೆ ತಿಂಗಳಿನಿಂದ ಸರಿಯಾದ ವ್ಯಾಪಾರ ವಹಿವಾಟು ಇಲ್ಲದೆ ಸೊರಗಿತ್ತು. ಟೊಮೆಟೊಗೆ ಸರಿಯಾದ ಬೆಲೆ ಇಲ್ಲದೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿ ರೈತರು ಕಂಗಾಲಾಗಿದ್ದರು.

ಗುತ್ತಿಗೆ ಜಮೀನಿನಲ್ಲಿ ಟೊಮೆಟೊ ಬೆಳೆದ ರೈತ; ಸ್ವಂತ ಜಮೀನು ಮಾರಿ ಸಾಲ ತೀರಿಸಿದಗುತ್ತಿಗೆ ಜಮೀನಿನಲ್ಲಿ ಟೊಮೆಟೊ ಬೆಳೆದ ರೈತ; ಸ್ವಂತ ಜಮೀನು ಮಾರಿ ಸಾಲ ತೀರಿಸಿದ

ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ

ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ

ಆದರೆ, ರಾಜ್ಯ ಸೇರಿದಂತೆ ಕೋಲಾರ ಜಿಲ್ಲೆಯಲ್ಲಿ ಎರಡ್ಮೂರು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ರಾಜ್ಯದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ವ್ಯಾಪಾರಸ್ಥರು, ಖರೀದಿದಾರರು ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ. ಗುಜರಾತ್, ತಮಿಳುನಾಡು, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿ, ಉತ್ತರಪ್ರದೇಶ, ಬಾಂಗ್ಲಾದೇಶ ಸೇರಿದಂತೆ ಹಲವು ರಾಜ್ಯಗಳಿಂದ ವ್ಯಾಪಾರಸ್ಥರು ಟೊಮೆಟೊ ಖರೀದಿಗೆ ಬಂದಿಳಿದಿದ್ದರ ಪರಿಣಾಮ ಪಾತಾಳಕ್ಕೆ ಕುಸಿದು ಬಿದ್ದಿದ್ದ ಟೊಮೆಟೊ ಬೆಲೆಯಲ್ಲಿ ಚೇತರಿಕೆ ಕಂಡಿದೆ.

ಟೊಮೆಟೊ ಆವಕ ಕೂಡಾ ಹೆಚ್ಚಾಗಿದೆ

ಟೊಮೆಟೊ ಆವಕ ಕೂಡಾ ಹೆಚ್ಚಾಗಿದೆ

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಮೇ, ಜೂನ್ ತಿಂಗಳಲ್ಲಿ ಟೊಮೆಟೊ ಸೀಸನ್ ಆರಂಭವಾಗುತ್ತದೆ. ಈ ಎರಡು ತಿಂಗಳಲ್ಲಿ ಭಾರೀ ಪ್ರಮಾಣದ ಟೊಮೆಟೊ ಆವಕ ಕೂಡಾ ಹೆಚ್ಚಾಗಿದೆ. ಆದರೆ, ಲಾಕ್‌ಡೌನ್ ಇದ್ದ ಪರಿಣಾಮ ವ್ಯಾಪಾರಸ್ಥರು ಬಂದಿರಲಿಲ್ಲ. ಈಗ ಸ್ವಲ್ಪ ಅನ್‌ಲಾಕ್ ಆಗುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಮಾರುಕಟ್ಟೆಯತ್ತ ಬಂದಿದ್ದಾರೆ. ಮಾರುಕಟ್ಟೆ ಸುತ್ತಲೂ ಹೊರ ರಾಜ್ಯದ ಲಾರಿಗಳಿಂದ ಟ್ರಾಫಿಕ್ ಜಾಮ್ ಆಗುವ ಮಟ್ಟಿಗೆ ದಟ್ಟಣೆ ಶುರುವಾಗಿದೆ.

  ಜೋಗ ಜಲಪಾತದ ಅಂದ ನೋಡಿ ಮೈಮರೆತ ಜನ | Shimoga Jog Falls | Oneindia Kannada
  ದೇಶದಲ್ಲಿ ಅನ್‌ಲಾಕ್ ಪ್ರಕ್ರಿಯೆ ಶುರು

  ದೇಶದಲ್ಲಿ ಅನ್‌ಲಾಕ್ ಪ್ರಕ್ರಿಯೆ ಶುರು

  ಕಳೆದ ಒಂದು ತಿಂಗಳಿನಿಂದ 15- 20 ರೂಪಾಯಿ ಬೆಲೆಯಿದ್ದ 15 ಕೆಜಿ ಬಾಕ್ಸ್ ಟೊಮೆಟೊ ಬೆಲೆ ಈಗ 80 ರಿಂದ 100 ರೂಪಾಯಿ ತಲುಪಿದೆ. ಸದ್ಯ ಚೇತರಿಕೆ ಕಂಡಿರುವ ಟೊಮೆಟೊ, ದೇಶದಲ್ಲಿ ಅನ್‌ಲಾಕ್ ಪ್ರಕ್ರಿಯೆ ಶುರುವಾದರೆ, ಟೊಮೆಟೊ ದರ ಏರುವುದರಲ್ಲಿ ಅನುಮಾನವಿಲ್ಲ. ಇಲ್ಲವಾದರೆ ರೈತರು, ವ್ಯಾಪಾರಿಗಳ ಪರಿಸ್ಥಿತಿ ಹೀನಾಯವಾಗುತ್ತದೆ ಎಂದು ವಹಿವಾಟುದಾರರು ಹೇಳುತ್ತಾರೆ. ಒಟ್ಟಿನಲ್ಲಿ, ಕೊರೊನಾ ಸೋಂಕಿನ ಕಾವು ಇಳಿಮುಖವಾಗುತ್ತಿದ್ದಂತೆ ವ್ಯಾಪಾರ ವಹಿವಾಟುಗಳು ಚೇತರಿಕೆ ಕಾಣುತ್ತಿದೆ. ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರು ಸ್ವಲ್ಪಮಟ್ಟಿಗಾದರೂ ನಷ್ಟದಿಂದ ಪಾರಾಗಲು ಅವಕಾಶ ಸಿಕ್ಕಂತಾಗಿದೆ.

  English summary
  Kolar Unlock: As the unlocking process begins in the state, traders and buyers from outside states are coming the Kolar APMC market.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X