ಕೋಲಾರದಲ್ಲಿ ಹಸುಳೆಯನ್ನೇ ಅಪಹರಿಸಿದ ಕಿರಾತಕರು
ಕೋಲಾರ, ಜು.11: ಮಗು ಹುಟ್ಟಿ ಕೇವಲ ಒಂದು ದಿನವಾಗಿತ್ತು, ಇನ್ನೂ ಸರಿಯಾಗಿ ಕಣ್ಣು ಬಿಡದ ಹಸುಳೆಯನ್ನು ಕಿರಾತಕರು ಆಸ್ಪತ್ರೆಯಿಂದ ಅಪಹರಿಸಿರುವ ಘಟನೆ ಕೋಲಾರದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಹೆಣ್ಣು ಮಗು ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಜನಿಸಿತ್ತು, ಹೆರಿಗೆ ವಾರ್ಡ್‌ನಲ್ಲಿ ಗಾಢ ನಿದ್ರೆಯಲ್ಲಿದ್ದ ತಾಯಿಯ ಕಣ್ಣು ತಪ್ಪಿಸಿ ಬೆಳಗಿನ ಜಾವ ಸುಮಾರು 3 ಗಂಟೆ ಹೊತ್ತಿಗೆ ಮಗುವನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ.

ಮುಳಬಾಗಿಲು ತಾಲೂಕಿನ ಎಚ್, ಗೊಲ್ಲಹಟ್ಟಿ ಪಂಚಾಯ್ತಿಯ ಒಬಮ್ಮಸಂದ್ರ ಗ್ರಾಮದ ವೇಣು ಕುಮಾರಿ ಮತ್ತು ನಾರಾಯಣಸ್ವಾಮಿ ದಂಪತಿಯ ಮಗುವಾಗಿತ್ತು, ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಿಸಲಾಗಿದೆ.












Click it and Unblock the Notifications