ವರ್ತೂರು ಪ್ರಕಾಶ್ ರೀ ಎಂಟ್ರಿ, ಹೊಸ ಪಕ್ಷ ಕಟ್ಟುವ ಸೂಚನೆ!

Posted By:
Subscribe to Oneindia Kannada

ಕೋಲಾರ/ರಾಯಚೂರು, ಜೂನ್ 19 : ಕೋಲಾರದ ಶಾಸಕ (ಪಕ್ಷೇತರ) ವರ್ತೂರು ಪ್ರಕಾಶ್ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ರಾಯಚೂರು ಜಿಲ್ಲೆ ಪ್ರವಾಸದಲ್ಲಿರುವ ಪ್ರಕಾಶ್ ಅವರು, ಮುಂಬರುವ ವಿಧಾನಸಭೆ ಚುನಾವಣೆ 2018ರ ವೇಳೆಗೆ ಹೊಸ ಪಕ್ಷ ಕಟ್ಟುವುದಾಗಿ ಹೇಳಿದ್ದಾರೆ.

Independent MLA Varthur Prakash hints at Floating a new party

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಪಕ್ಷ ಮಾಡುವ ಬಗ್ಗೆ ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಚಿಂತನೆ ನಡೆಸಿದ್ದು, ಜುಲೈ ತಿಂಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು, ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಹೇಳಿದರು.

ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳಿಗೆ ಹತ್ತಿರವಾಗಿ ಈಗ ದೂರವುಳಿದಿರುವ ವರ್ತೂರ್ ಪ್ರಕಾಶ್ ಅವರ ನಡೆಯನ್ನು ಅವರ ಅಭಿಮಾನಿಗಳು ಸ್ವಾಗತಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kolar Independent MLA Varthur Prakash who is touring in Raichur district has announced that he will float a new party before upcoming Assembly Elections 2017.
Please Wait while comments are loading...