ಕೋಲಾರದ ಗುಂಟ್ಲಪಲ್ಲಿ ಬಳಿ ಹೈಟೆಕ್ ಇಸ್ಪೀಟ್ ಅಡ್ಡೆ
ಕೋಲಾರ, ಫೆಬ್ರವರಿ 20: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಸ್ವಕ್ಷೇತ್ರದಲ್ಲಿ ಹೈಟೆಕ್ ಗ್ಯಾಂಬ್ಲಿಂಗ್ ನಡೆಯುತ್ತಿರುವ ಸಂಗತಿ ತಿಳಿದುಬಂದಿದೆ. ಕ್ರೀಡೆಗೆ ಮತ್ತು ಹೋಟೆಲ್ ಕ್ಲಬ್ ನಡೆಸಲೆಂದು ಅನುಮತಿಯನ್ನು ಪಡೆದುಕೊಂಡು ಗ್ಯಾಂಬ್ಲಿಂಗ್ ನಡೆಸಲಾಗುತ್ತಿದೆ.
ಕೋಲಾರದ ರಾಯಲ್ಪಾಡು ಹೋಬಳಿಯ ಗುಂಟ್ಲಪಲ್ಲಿ ಬಳಿ ಅಂತರರಾಜ್ಯ ಹೈಟೆಕ್ ಗ್ಯಾಂಬ್ಲಿಂಗ್ ಅಡ್ಡೆ ನಡೆಯುತ್ತಿದ್ದು, ಇದನ್ನು ಆಂಧ್ರ ಮೂಲದ ಪ್ರವೀಣ್ ರೆಡ್ಡಿ ಹಾಗೂ ಮುದ್ದಿ ರೆಡ್ಡಿ ಎಂಬುವವರು ನಡೆಸುತ್ತಿದ್ದಾರೆ.
ಗಡಿ ಜಿಲ್ಲೆಯಲ್ಲಿನ ಈ ಅಂತರರಾಜ್ಯ ಹೈಟೆಕ್ ಇಸ್ಪೀಟ್ ಅಡ್ಡೆಯಲ್ಲಿ ಆಂಧ್ರ, ತಮಿಳುನಾಡು, ಬೆಂಗಳೂರು ಶ್ರೀಮಂತರು ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಲವೆಡೆ ಈ ರೀತಿ ಇಸ್ಪೀಟ್ ಅಡ್ಡೆಗಳು ಕಾರ್ಯಾಚರಣೆ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ತಂದಿದೆ.

ಈ ದಂಧೆಯಲ್ಲಿ ಕೆಲ ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರು ಶಾಮೀಲಾಗಿರುವ ಆರೋಪವೂ ಕೇಳಿಬಂದಿದೆ.












Click it and Unblock the Notifications