ತರಕಾರಿ ಬೆಲೆಯಲ್ಲಿ ಏರಿಕೆ; ಕೋಲಾರದಲ್ಲಿ ಶುರುವಾದ ವಹಿವಾಟು

ಕೋಲಾರ, ಜೂನ್ 16: ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾದ ವೇಳೆ ಮಾರುಕಟ್ಟೆ ಇಲ್ಲದೇ, ತರಕಾರಿ ಬೆಲೆಯೂ ಕುಸಿದು ರೈತರು ಕಂಗಾಲಾಗಿದ್ದರು. ಎಷ್ಟೋ ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ನಿರಾಸೆಯಿಂದ ಬೀದಿಗೆ ಎಸೆದರು. ಈ ಎರಡೂವರೆ ತಿಂಗಳಲ್ಲಿ ಕೃಷಿಯಲ್ಲಿ ಆದ ನಷ್ಟ ಅಷ್ಟಿಷ್ಟಲ್ಲ.

Recommended Video

      IPL might start from 26th September | IPL 2020 | Oneindia Kannada

      ಆದರೆ ಇದೀಗ ಲಾಕ್ ಡೌನ್ ಸಡಿಲಿಕೆಯಾಗಿದ್ದು, ರೈತರು ಸ್ವಲ್ಪವೇ ಚೇತರಿಸಿಕೊಂಡಿದ್ದಾರೆ. ತರಕಾರಿ ಬೆಲೆಗಳು ಕೊಂಚ ಹೆಚ್ಚಾಗಿದ್ದು, ರೈತರು ಲಾಭ ನೋಡುವಂತಾಗಿದೆ.

      ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಕ್ಯಾಪ್ಸಿಕಂ ಬೆಲೆ 50 ರಿಂದ 60 ರೂ, ಬೀನ್ಸ್ 40 ರೂ, ಕ್ಯಾರೆಟ್ 30 ರೂ, ಟೊಮೆಟೊ ಒಂದು ಕೆ.ಜಿ.20 ರೂ, ಬೀಟ್ ರೂಟ್ 25 ರೂ, ಕೊತ್ತಂಬರಿ ಸೊಪ್ಪು 60 ರೂಗೆ ಏರಿಕೆಯಾಗಿದೆ.

       ತೋಟಗಳಲ್ಲೇ ಕೊಳೆತ ತರಕಾರಿಗಳು

      ತೋಟಗಳಲ್ಲೇ ಕೊಳೆತ ತರಕಾರಿಗಳು

      ಲಾಕ್ ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರವಿಲ್ಲದೆ ತರಕಾರಿಗಳನ್ನು ಕೇಳುವವರೇ ಇರಲಿಲ್ಲ. ಬೆಳೆಯನ್ನು ಸಾಗಿಸಲು ಸಾಧ್ಯವಾಗದೆ ತೋಟಗಳಲ್ಲೇ ಕೊಳೆಯುವಂತಾಗಿತ್ತು. ತರಕಾರಿಗಳನ್ನು ಕಿತ್ತು ತಂದು ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರಸ್ತೆಗಳಿಗೆ ಎಸೆಯುತ್ತಿದ್ದರು. ಹೀಗಾಗಿ ರೈತರು ತೀವ್ರ ನಷ್ಟಕ್ಕೆ ಒಳಗಾಗಿ ಪರದಾಡುವಂತಾಗಿತ್ತು. ಕೆಲವು ಕಡೆ ಜನರಿಗೆ ಉಚಿತವಾಗಿ ಹಂಚಿಕೆ ಮಾಡಿದ್ದೂ ಇದೆ. ಇನ್ನೂ ಕೆಲವು ಕಡೆ ರೈತರು ಬೆಳೆದ ತರಕಾರಿಯನ್ನು ಜನಪ್ರತಿನಿಧಿಗಳೇ ಖರೀದಿಸಿ ರೈತರ ನಷ್ಟಕ್ಕೆ ಸ್ಪಂದಿಸಿದ್ದೂ ಇದೆ.

       ಕೋಲಾರದಿಂದ ಹೊರರಾಜ್ಯಗಳಿಗೆ ಶೇ.95ರಷ್ಟು ತರಕಾರಿ ರಫ್ತು

      ಕೋಲಾರದಿಂದ ಹೊರರಾಜ್ಯಗಳಿಗೆ ಶೇ.95ರಷ್ಟು ತರಕಾರಿ ರಫ್ತು

      ಕೋಲಾರದಲ್ಲಿ ಬೆಳೆಯುವ ತರಕಾರಿಗಳಲ್ಲಿ ಶೇ.95ರಷ್ಟು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸರಬರಾಜಾಗುತ್ತದೆ. ಶೇ.5ರಷ್ಟನ್ನು ಮಾತ್ರ ಸ್ಥಳೀಯರು ಬಳಸುತ್ತಾರೆ. ಇಲ್ಲಿ ಬೆಳೆದ ತರಕಾರಿ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಛತ್ತೀಸ್ ‍ಗಡ, ಒಡಿಶಾ, ಕೊಲ್ಕತ್ತಾ, ಗುಜರಾತ್ ರಾಜ್ಯಗಳಿಗೆ ಸರಬರಾಜು ಆಗುತ್ತದೆ. ಹೊರ ರಾಜ್ಯಗಳಿಂದ ಪ್ರತಿದಿನ ಸುಮಾರು 300 ಲಾರಿ ಮತ್ತು ಟೆಂಪೋಗಳಲ್ಲಿ ತರಕಾರಿ ಸರಬರಾಜಾಗುತ್ತದೆ.

       ವಾರದಿಂದ ಏರಿಕೆಯಾಗಿದೆ ತರಕಾರಿ ಬೆಲೆ

      ವಾರದಿಂದ ಏರಿಕೆಯಾಗಿದೆ ತರಕಾರಿ ಬೆಲೆ

      ಲಾಕ್ ಡೌನ್ ಹಿನ್ನೆಲೆಯಲ್ಲಿ ಲಾರಿ ಮತ್ತು ಇತರೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ತರಕಾರಿಗಳನ್ನು ಕೇಳುವವರಿಲ್ಲದೆ ಬೆಳೆದ ತೋಟಗಳಲ್ಲೇ ಕೊಳೆತು ಹಾಳಾದವು. ಇದರಿಂದ ರೈತರಿಗೆ ತೀವ್ರ ನಷ್ಟ ಉಂಟಾಗಿತ್ತು. ಆದರೆ ಲಾಕ್ ಡೌನ್ ಸಡಿಲಿಕೆ ನಂತರ ತರಕಾರಿ ಬೆಲೆಯಲ್ಲಿ ಸ್ವಲ್ಪ ಸ್ವಲ್ಪವೇ ಏರಿಕೆ ಆಗತೊಡಗಿತು. ಜೂ.8ರ ನಂತರ ವಾಹನ ಓಡಾಟ ಮತ್ತು ಹೋಟೆಲ್, ಮದುವೆ ಸಮಾರಂಭಗಳನ್ನು ನಡೆಸಲು ಅನುಮತಿ ನೀಡಿದ್ದರಿಂದ ತರಕಾರಿ ಬೆಲೆಗಳು ಏರಿಕೆ ಕಂಡಿವೆ. ಕಳೆದ ಒಂದು ವಾರದಿಂದ ಬೆಲೆ ಮತ್ತಷ್ಟು ಏರಿಕೆ ಆಗಿದೆ.

       ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ಏರಿಕೆ

      ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ಏರಿಕೆ

      ಸದ್ಯ ಟೊಮೆಟೊ ಬೆಲೆಯು 15 ಕೆ.ಜಿ. ಬಾಕ್ಸ್‌ಗೆ 150 ರಿಂದ 300 ರೂಗಳಾಗಿದೆ. ಹೀಗಾಗಿ ಟೊಮೆಟೊ ಬೆಳೆದ ರೈತರು ಸ್ವಲ್ಪ ನಿರಾಳವಾಗಿದ್ದಾರೆ. ಕಳೆದ 15 ದಿವಸಗಳಿಂದ ಟೊಮೆಟೊ ಬೆಲೆಯಲ್ಲಿ ಏರಿಕೆ ಕಂಡಿದೆ. ನಾಟಿ ಟೊಮೆಟೊ ಒಂದು ಬಾಕ್ಸ್ 300 ರೂಗಳಿದ್ದರೆ, ಸೀಡ್ಸ್ ಟೊಮೆಟೊ 250 ರೂಗಳವರೆಗೆ ಏರಿಕೆ ಆಗಿದೆ. ಸದ್ಯ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ ಎಂದು ಕೋಲಾರ ಎಪಿಎಂಸಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+