ಕೋಲಾರ; ಕುಡಿದ ಮತ್ತಲ್ಲಿ ಹಾವನ್ನೇ ಕಚ್ಚಿ ಸಾಯಿಸಿದ!
ಕೋಲಾರ, ಮೇ 05: ಹೊಟ್ಟೆ ತುಂಬಾ ಕುಡಿದ ವ್ಯಕ್ತಿಯೊಬ್ಬ ಆ ಮತ್ತಿನಲ್ಲಿ ಹಾವನ್ನೇ ಕಚ್ಚಿ ಸಾಯಿಸಿರುವ ಸಂಗತಿ ಕೋಲಾರದಲ್ಲಿ ನಡೆದಿದೆ. ಹಲವು ದಿನಗಳ ನಂತರ ನಿನ್ನೆಯಷ್ಟೇ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಹೀಗಾಗಿ ಚೆನ್ನಾಗಿ ಕುಡಿದ ಈತ ಈ ಕೆಲಸ ಮಾಡಿದ್ದಾನೆ.
Recommended Video
ಒಂದು ದಿನಕ್ಕೆ 4 ಕೋಟಿಯಷ್ಟು ಎಣ್ಣೆ ಮಾರಾಟವಾದ್ರೆ ನಮ್ಮ ದೇಶ ಅಭಿವೃದ್ಧಿಯಾಗದ ದೇಶನಾ?? | Tonique | Bangalore
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಚೆನ್ನಾಗಿ ಕುಡಿದು ಮತ್ತೇರಿಸಿಕೊಂಡ ಈತ ಹಾವನ್ನು ಒಂದೇ ಸಮನೆ ಕಚ್ಚಿ ಕೊಂದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ದ್ವಿಚಕ್ರ ವಾಹನದಲ್ಲಿ ಈತ ಹೋಗುತ್ತಿದ್ದಾಗ ಬೈಕ್ ಗೆ ಹಾವು ಅಡ್ಡಬಂದಿದೆ. ಆಗ ಗಾಡಿಯನ್ನು ನಿಲ್ಲಿಸಿದ ಈತ ಬೈಕ್ ಬಳಿ ಇದ್ದ ಹಾವನ್ನು ಕೈಗೆ ಎತ್ತಿಕೊಂಡಿದ್ದಾನೆ. ನಂತರ ಅದನ್ನು ಕೊರಳ ಸುತ್ತ ಸುತ್ತಿಕೊಂಡು, ಅದರ ಬಾಯಿ, ಬಾಲವನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಕಚ್ಚಲು ಆರಂಭಿಸಿದ್ದಾನೆ. ಸುಮಾರು ನಿಮಿಷ ಹೀಗೆ ಮಾಡಿ ಕೊನೆಗೆ ಹಾವು ಸಾವನ್ನಪ್ಪಿದೆ.
ಕುಡಿದು ಹಾವನ್ನು ಸಾಯಿಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications