ಕೋಲಾರದಿಂದ ಚುನಾವಣೆ ಅಖಾಡಕ್ಕೆ ಡಿಕೆ ರವಿ ತಾಯಿ?
Recommended Video

ಕೋಲಾರ, ನವೆಂಬರ್ 13: ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವಿಗೆ ನ್ಯಾಯ ಸಿಕ್ಕಿಲ್ಲ. ಇದಕ್ಕಾಗಿ ಚುನಾವಣಾ ಕಣಕ್ಕಿಳಿದು ಹೋರಾಟ ನಡೆಸಲು ಅಭಿಮಾನಿಗಳು, ಬೆಂಬಲಿಗರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಡಿಕೆ ರವಿ ಅವರ ತಾಯಿ ಗೌರಮ್ಮ ಅವರನ್ನು ಕಣಕ್ಕಿಳಿಸಲು ಒತ್ತಡ ಹೇರಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಕೋಲಾರದಿಂದ ಸ್ಪರ್ಧಿಸ ಲು ರವಿ ಅಭಿಮಾನಿಗಳು ಕೇಳಿಕೊಂಡಿರುವುದು ನಿಜ ಎಂದು ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದರು. ಆದರೆ, ಯಾವ ಪಕ್ಷದ ಬೆಂಬಲ ಕೋರುತ್ತಾರೆ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದರ ಸುಳಿವು ಬಿಟ್ಟುಕೊಡಲಿಲ್ಲ.

ಡಿ.ಕೆ. ರವಿ ಅವರ ಸಾವಿನ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಹೋರಾಟ ನಡೆಸಬೇಕಿದೆ ಎಂಬುದು ಅವರ ಬೆಂಬಲಿಗರ ಅನಿಸಿಕೆಯಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ರವಿ ಅವರ ಸಾವಿನ ಕುರಿತಾಗಿ ಕಾಂಗ್ರೆಸ್ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಕೋಲಾರದಲ್ಲಿ ಡಿ.ಕೆ. ರವಿ ಕೆಲಸ ಮಾಡಿದ್ದು, ಜನಾನುರಾಗಿಯಾಗಿದ್ದರು.ಕೋಲಾರದಿಂದ ಗೌರಮ್ಮ ಅವರು ಸ್ಪರ್ಧಿಸಿ, ನ್ಯಾಯಕ್ಕಾಗಿ ಹೋರಾಟ ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಯ.
ಕಮರ್ಷಿಯಲ್ ಟ್ಯಾಕ್ಸ್ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರ ಶವ ಮಾರ್ಚ್ 16, 2015ರಂದು ಬೆಂಗಳೂರಿನ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಸಿಬಿಐ ತನಿಖೆ ಕೈಗೊಂಡರೂ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ.












Click it and Unblock the Notifications