ಕೋಲಾರ; ವ್ಯಾಕ್ಸಿನ್ ಡ್ರೈ ರನ್ ಕಾರ್ಯಕ್ರಮ 2 ಬಾರಿ ಉದ್ಘಾಟನೆ!
ಕೋಲಾರ, ಜನವರಿ 08: ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಕಾರ್ಯಕ್ರಮವನ್ನು ಎರಡು ಸಲ ಉದ್ಘಾಟನೆ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ. ಜನಪ್ರತಿನಿಧಿಗಳನ್ನು ಓಲೈಸಲು ಮುಂದಾದ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದಾಗಿ ಇಂತಹ ಘಟನೆ ನಡೆದಿದ್ದು, ಕೋಲಾರ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ.
ಕೋವಿಡ್ ಲಸಿಕೆ ಡ್ರೈರನ್ ಕಾರ್ಯಕ್ರಮವನ್ನು ಮೊದಲು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ನಾಗೇಶ್ ಉದ್ಘಾಟನೆ ಮಾಡಿದರು. 10 ನಿಮಿಷದ ಬಳಿಕ 2ನೇ ಬಾರಿಗೆ ಇದೇ ಕಾರ್ಯಕ್ರಮವನ್ನು ಬಿಜೆಪಿ ಸಂಸದ ಮುನಿಸ್ವಾಮಿ ಉದ್ಘಾಟನೆ ಮಾಡಿದರು.
ಒಂದೇ ಸ್ಥಳದಲ್ಲಿ ಎರಡು ಬಾರಿ ಟೇಪ್ ಕತ್ತರಿಸುವ ಮೂಲಕ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಕಾರ್ಯಕ್ರಮ ಉದ್ಘಾಟನೆ ಮಾಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಇಂತಹ ಘಟನೆಯನ್ನು ನೋಡಿ ಸುಮ್ಮನಿದ್ದರು.

ಕೋಲಾರ ಜಿಲ್ಲೆಯ 8 ಕಡೆಗಳಲ್ಲಿ ಕೋವಿಡ್ ಲಸಿಕೆ ಡ್ರೈ ರನ್ ನಡೆಯುತ್ತಿದೆ. 200 ಸಿಬ್ಬಂದಿ ಡ್ರೈ ರನ್ ನಲ್ಲಿ ಭಾಗವಹಿಸಿದ್ದಾರೆ. ಒಮ್ಮೆ 5 ಜನ ವೈದ್ಯರನ್ನು 25 ಮಂದಿಗೆ ಲಸಿಕೆ ನೀಡಲು ನಿಯೋಜನೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಲಸಿಕೆ ಬರಲಿದ್ದು, ಅದನ್ನು ನೀಡಲು ತಾಲೀಮು ನಡೆಸಲಾಗುತ್ತಿದೆ.
ಒಂದೇ ಕಾರ್ಯಕ್ರಮ ಎರಡು ಬಾರಿ ಉದ್ಘಾಟನೆ.
— oneindiakannada (@OneindiaKannada) January 8, 2021
ಕೋಲಾರದಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಉದ್ಘಾಟಸಿದ ನಂತರ ಅದೇ ಕಾರ್ಯಕ್ರಮ ಮತ್ತೆ ಉದ್ಘಾಟನೆ.
ಸಂಸದ ಮುನಿಸ್ವಾಮಿ ಅವರಿಂದ ಎರಡನೇ ಬಾರಿಗೆ ಉದ್ಘಾಟನೆ.
ಒಂದೇ ಸ್ಥಳದಲ್ಲಿ ಎರಡೆರೆಡು ಬಾರಿ ಟೇಪ್ ಕತ್ತರಿಸಿದ ಜನಪ್ರತಿನಿಧಿಗಳು. #kolar pic.twitter.com/ZCO3c4ba9R
ಕೋಲಾರದಲ್ಲಿ ಬಿಜೆಪಿ ಸಂಸದ ಮುನಿಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಸಮನ್ವಯತೆ ಇಲ್ಲ. ಕೆಲವು ದಿನಗಳ ಹಿಂದೆ ಒಬ್ಬರಿಗೊಬ್ಬರು ಟಾಂಗ್ ಕೊಟ್ಟಿದ್ದರು.












Click it and Unblock the Notifications