ವಾಣಿಜ್ಯ ತೆರಿಗೆ ಅಧಿಕಾರಿಗಳು 53 ಕೋಟಿ ದಂಡ ಹೇರಿದ್ದು ಯಾರಿಗೆ?
ಬೆಂಗಳೂರು, ಸೆಪ್ಟೆಂಬರ್ 5: ಮಾಲೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರಿಗೆ ಪಾವತಿಸದ ಕಂಪನಿಗಿಗೆ ಭಾರಿ ದಂಡ ವಿಧಿಸಿದೆ.
ಮಾಲೂರಿನ ಕೈಗಾರಿಕಲಾ ಪ್ರದೇಶದಲ್ಲಿರುವ ಅಸೋಸಿಯೇಟೆಡ್ ಡೆಕೋರ್ ಕಂಪನಿ ವಾಣಿಜ್ಯ ತೆರಿಗೆಯನ್ನು ಪಾವತಿಸದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 53ಕೋಟಿ ರೂ. ದಂಡ ವಿಧಿಸಿದ್ದಾರೆ.
53ಕೋಟಿ ರೂ. ದಂಡ ವಿಧಿಸುವುದುರ ಜತೆಗೆ ಕಂಪನಿಯ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಮರ್ಷಿಯಲ್ ಟ್ಯಾಕ್ಸ್ ಜಂಟಿ ಆಯುಕ್ತ ಶಿವಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ತೆರಿಗೆ ಪಾವತಿಸುವಂತೆ ಹಲವಾರು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಕಂಪನಿ ಈ ನೋಟಿಸ್ ಗಳಿಗೆ ತಲೆಕಡಿಸಿಕೊಂಡಿರಲಿಲ್ಲ, ಯಾವುದೇ ತೆರಿಗೆ ಹಣವನ್ನು ಕಟ್ಟಿರಲಿಲ್ಲ.

ಈ ಹಿನ್ನಲೆಯಲ್ಲಿ ಖುದ್ದಾಗಿ ಕಂಪನಿಗೆ ಆಗಮಿಸಿದ ತೆರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸಿ ಸ್ವತ್ತುಗಳನ್ನು ವಶಪಡಿಸಿಕೊಳ್ಳುವುದರ ಮೂಲಕ ವಾಣಿಜ್ಯ ತೆರಿಗೆ ಪಾವತಿಸದ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications