ಕೋಲಾರ; ನಾಪತ್ತೆಯಾಗಿದ್ದ ಮಗು ಮನೆಯ ಸಂಪ್ ನಲ್ಲಿ ಶವವಾಗಿ ಪತ್ತೆ
ಕೋಲಾರ, ಫೆಬ್ರವರಿ 18: ಒಂದೂವರೆ ತಿಂಗಳ ಹೆಣ್ಣು ಮಗುವಿನ ಶವ ಮನೆಯ ಸಂಪ್ ನಲ್ಲಿ ಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ರಘುಪತಿ ಹಾಗೂ ಹರ್ಷಿತಾ ದಂಪತಿಯ ಒಂದೂವರೆ ತಿಂಗಳ ಹೆಣ್ಣು ಮಗು ನಾಪತ್ತೆಯಾಗಿರುವುದಾಗಿ ಸುದ್ದಿಯಾಗಿತ್ತು. ಮಗುವನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಆ ಮಗುವಿನ ಶವ ಸಂಪ್ ನಲ್ಲಿ ಪತ್ತೆಯಾಗಿದೆ. ಉದ್ದೇಶಪೂರ್ವಕವಾಗಿ ಮಗುವನ್ನು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ನಾಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಾಗ್ ಸ್ಕ್ವಾಡ್ ಬಂದಿತ್ತು. ಶ್ವಾನ ಸಂಪ್ ಸುತ್ತ ಗಿರಿಕಿ ಹೊಡೆಯುತ್ತಿದ್ದುದನ್ನು ಗಮನಿಸಿ ಸಂಪ್ ತೆರೆದು ನೋಡಿದಾಗ ಮಗುವಿನ ಶವ ಕಂಡಿದೆ.

ಸ್ಥಳಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ, ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಮಗು ಅಜ್ಜಿ ರತ್ನಮ್ಮ, ತಾಯಿ ಹರ್ಷಿತಾ ಹಾಗೂ ತಂದೆ ರಘುಪತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications