ಕೋಲಾರ; ಬಾಲ ಮಂದಿರದ 13 ಮಕ್ಕಳಿಗೆ ಕೋವಿಡ್ ಸೋಂಕು

ಕೋಲಾರ, ಜೂನ್ 04; ಕೋಲಾರ ಜಿಲ್ಲೆಯಲ್ಲಿ ಕೊರೊನಾ ಮಕ್ಕಳ ಮೇಲೆ ಸವಾರಿ ಮಾಡುವ ಮೂಲಕ ಬಿಟ್ಟು ಬಿಡದೇ ಕಾಡಲಾರಂಭಿಸಿದೆ. ಒಂದೇ ಗ್ರಾಮದಲ್ಲಿ 11 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡ ಪ್ರಕರಣ ಎರಡು ದಿನಗಳ ಹಿಂದೆ ವರದಿಯಾಗಿತ್ತು.

ಶುಕ್ರವಾರ ಬಾಲ ಮಂದಿರದ 13 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಆತಂಕ ಉಂಟಾಗಿದೆ. ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, 3ನೇ ಅಲೆ ಆರಂಭವಾಗಿರುವ ಸೂಚನೆ ನೀಡಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ಬಳಿ ಇರುವ ಬಾಲಮಂದಿರ 13 ಹೆಣ್ಣು ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದ್ದು ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. 17 ಹೆಣ್ಣು ಮಕ್ಕಳಿರುವ ಬಾಲಮಂದಿರದಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.

13 Child Tested Positive For Covid In Kolar Balamandira

ಪರೀಕ್ಷೆ ವೇಳೆ 13 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಎಲ್ಲಾ ಮಕ್ಕಳನ್ನು ಬಿಜಿಎಂಎಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆರೋಗ್ಯವಾಗಿರುವ ಮಕ್ಕಳಿಗೆ ಮುನ್ನಚ್ಚರಿಕಾ ಕ್ರಮವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಮಸ್ಕಾಂ ಬಾಲಮಂದಿರದಲ್ಲಿ ಒಟ್ಟು 35 ಮಕ್ಕಳಿದ್ದು, ಅದರಲ್ಲಿ 18 ಜನ ಗಂಡು ಮಕ್ಕಳಿಗೆ ಇನ್ನೂ ಪರೀಕ್ಷೆ ಮಾಡಿಲ್ಲ ಎನ್ನುವ ಮಾಹಿತಿಯನ್ನು ಮಕ್ಕಳ ರಕ್ಷಣಾಧಿಕಾರಿ ರಮೇಶ್ ನೀಡಿದ್ದಾರೆ.

ಜೂನ್ 3ರ ವರದಿ ಪ್ರಕಾರ ಕೋಲಾರ ಜಿಲ್ಲೆಯಲ್ಲಿ 317 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6062. ಇದುವರೆಗೂ ಜಿಲ್ಲೆಯಲ್ಲಿ 354 ಜನರು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+