ಉತ್ತರ ಕನ್ನಡ: ಗ್ರಾ.ಪಂ ಚುನಾವಣೆಯಲ್ಲಿ ಜಯ ಗಳಿಸಿದ ಅಣ್ಣ-ತಮ್ಮ
ಕಾರವಾರ, ಡಿಸೆಂಬರ್ 30: ಮುಂದಿನ ಚುನಾವಣೆಗಳ ದಿಕ್ಸೂಚಿಯೆಂದೇ ಕರೆಯಲ್ಪಡುವ ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ (ಡಿ.30) ರಂದು ನಡೆದಿದೆ. ಡಿ.22 ಮತ್ತು 27 ರಂದು ಎರಡು ಹಂತಗಳಲ್ಲಿ ಗ್ರಾಮ ಪಂಚಾಯತಿಗಳ ಚುನಾವಣೆಗೆ ಮತದಾನ ನಡೆದಿತ್ತು.
ಬುಧವಾರ ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಹೋದರರಿಬ್ಬರು ಗೆಲುವು ಸಾಧಿಸಿದ್ದಾರೆ.
ಕಾರವಾರ ತಾಲೂಕಿನ ಘಾಡಸಾಯಿ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಅಣ್ಣ-ತಮ್ಮರು ಗೆಲುವು ಸಾಧಿಸಿದ್ದು, ಬೋಳಶಿಟ್ಟಾ ವಾರ್ಡ್‌ನಿಂದ ಸ್ಪರ್ಧಿಸಿದ್ದ ಗಿರೀಶ ಕೊಠಾರಕರ್ 181 ಮತಗಳನ್ನು ಪಡೆದು 61 ಮತಗಳಿಂದ ಗೆಲುವು ಪಡೆದಿದ್ದಾರೆ. ಇವರದ್ದು ಇದು ಮೂರನೆ ಬಾರಿಯ ಗೆಲುವಾಗಿದೆ.

ಇನ್ನು ಹಳಗೆಜೂಗದ ವಾರ್ಡ್‌ನಿಂದ ಸ್ಪರ್ಧಿಸಿದ್ದ ಗಿರೀಶ ಕೊಠಾರಕರ್ ತಮ್ಮ ಅವಿನಾಶ ಕೊಠಾರಕರ್‌ಗೂ ಗೆಲುವು ದೊರೆತಿದ್ದು, 221 ಮತಗಳನ್ನು ಪಡೆದು 19 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದು ಇವರಿಗೆ ಮೊದಲ ಗೆಲುವಾಗಿದೆ. ಗ್ರಾ.ಪಂ ಚುನಾವಣೆ ಗೆಲುವಿಗೆ ಇಬ್ಬರೂ ಸಹೋದರರು ಹರ್ಷ ವ್ಯಕ್ತಪಡಿಸಿದ್ದಾರೆ












Click it and Unblock the Notifications