ಭಟ್ಕಳದಲ್ಲಿ ಸೋಂಕಿತ ವೃದ್ಧನ ಹೆಂಡತಿ, ಮಕ್ಕಳಿಗೂ ಕೊರೊನಾ; ಜಿಲ್ಲೆಯಲ್ಲಿ ಒಟ್ಟು 7 ಕೇಸ್

ಕಾರವಾರ, ಮಾರ್ಚ್ 28: ಭಟ್ಕಳದಲ್ಲಿ ಮತ್ತೆ ಮೂವರಲ್ಲಿ ಕೋವಿಡ್- 19 ಸೋಂಕು ಇರುವುದು ಇಂದು ದೃಢಪಟ್ಟಿದೆ. ದುಬೈನಿಂದ ಬಂದಿದ್ದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಈ ವ್ಯಕ್ತಿಯ ಕುಟುಂಬದವರಿಗೂ ಸೋಂಕು ಇರುವುದು ದೃಢಪಟ್ಟಿದೆ.

Recommended Video

      ಪೊಲೀಸ್ ಹಾಗು ಯುವಕನ ನಡುವೆ ಹಾಸನದಲ್ಲಿ ಮಾರ ಮಾರಿ | Oneindia Kannada

      ಈತನ 55 ವರ್ಷದ ಪತ್ನಿ, 22 ಹಾಗೂ 28 ವರ್ಷದ ಪುತ್ರಿಯರಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟಾರೆ ಈಗ ಭಟ್ಕಳ ಮೂಲದ ಏಳು (6+1) ಜನರಲ್ಲಿ ಸೋಂಕು ಇರುವುದು ದೃಢಪಟ್ಟಂತಾಗಿದೆ.

      Three More Coronavirus Cases Reported In Bhatkal Total 7 Cases In Uttata Kannada District

      ಸೋಂಕಿತ ಎಲ್ಲರನ್ನೂ ಕಾರವಾರದ ಪತಂಜಲಿ ನೌಕಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಮೊದಲು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾರ್ಚ್ 19ರಂದು ಆಗಮಿಸಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಭಟ್ಕಳ ಮೂಲದ 40 ವರ್ಷ, 65 ವರ್ಷದ ವ್ಯಕ್ತಿಗಳಲ್ಲಿ ಕೊರೊನಾ ಇರುವುದು ತಿಳಿದುಬಂದಿತ್ತು. ನಂತರ ದುಬೈನಿಂದ ಬಂದಿದ್ದ 22 ವರ್ಷದ ಯುವಕನಲ್ಲೂ ಸೋಂಕು ಇರುವುದು ನಿನ್ನೆಯಷ್ಟೆ ತಿಳಿದುಬಂದಿತ್ತು. ಇದೀಗ ಸೋಂಕಿತನಾಗಿದ್ದ 65 ವರ್ಷ ವ್ಯಕ್ತಿಯ ಕುಟುಂಬದ ಮೂವರಿಗೂ ಸೋಂಕು ಇರುವುದಾಗಿ ತಿಳಿದುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+