ನಾಡಿಗೆ ಬಂದ ಕಾಡಿನ ಪ್ರಾಣಿಗಳು: ಕಾರವಾರ ಈ ಪುಟ್ಟ ಗ್ರಾಮದಲ್ಲಿ ವಿಶೇಷ ಜಾತ್ರೆ ಆಚರಣೆ
ಕಾರವಾರ, ಡಿಸೆಂಬರ್ 19: ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟ ಕುಗ್ರಾಮವಾದ ನಗೆಯಲ್ಲಿ ಇತ್ತೀಚಿಗೆ ಸ್ವಯಂ ಉದ್ಭವಿಸಿದ ಶ್ರೀ ಮಹಾದೇವ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ನಗೆ ಜಾತ್ರೆಯ ವಿಶೇಷ ವಾಡಿಕೆ ಅಂದರೆ ಹಗರಣದ ದೃಶ್ಯಾವಳಿಗಳು ಈ ಹಗರಣವನ್ನು ನೋಡಲು ಕಾರವಾರ ಅಂಕೋಲಾ ತಾಲೂಕಿನಿಂದ ಹಿಡಿದು ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಅದಕ್ಕೆ ನಗೆ ಗ್ರಾಮದ ಜಾತ್ರೆಯನ್ನು ಹಗರಣದ ಜಾತ್ರೆ ಎಂದು ಕರೆಯಲ್ಪಟ್ಟಿದೆ.
ಇಲ್ಲಿನ ಗ್ರಾಮಸ್ಥರು ತಮ್ಮ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಿ ಹಗರಣದ ದೃಶ್ಯಾವಳಿಗಳ ಪೂರ್ವ ತಯಾರಿಯನ್ನು ಎರಡು ತಿಂಗಳ ಮುಂಚೆಯೇ ಎಲ್ಲಾ ವಸ್ತು ಸಲಕರಣೆಯನ್ನು ತಯಾರಿಸುವ ಮೂಲಕ ತಮ್ಮ ಸ್ವಂತ ಹಣದಿಂದ ತಯಾರಿಸುತ್ತಾರೆ. ತಾವು ರೈತರು ಹಾಗೂ ಹಿಂದುಳಿದ ವರ್ಗಗಳು ಆದರೂ ಸಹ ತಮ್ಮ ಆಚರಣೆ ಹಬ್ಬ ಹರಿದಿನಗಳಲ್ಲಿ ಯಾವುದೇ ರೀತಿಯ ಅಡಚಣೆಗಳು ಬರದಂತೆ ನೋಡಿಕೊಂಡು ವಿಜೃಂಭಣೆಯಿಂದ ಜಾತ್ರೆ ಆಚರಿಸುತ್ತಾ ಬಂದಿದ್ದಾರೆ.

ಹಗರಣದಲ್ಲಿ ಹುಲಿಯಲ್ಲಿ ಕುಳಿತ ಅಯ್ಯಪ್ಪ ಸ್ವಾಮಿ, ಶ್ರೀ ಸಾಯಿಬಾಬಾ ವೇಷಧಾರಿ, ಬೃಹತ್ ಗ್ರಾತದ ನರಕಾಸುರ, ಮಗು ಹಿಡಿದು ನಿಂತಿದ್ದ ರಾಕ್ಷಸಿ, ತಿಮಿಂಗಿಲ, ದೊಡ್ಡ ಗ್ರಾತದ ಅನೇಕ ಜಾತಿಯ ಪ್ರಾಣಿಗಳು, ಸ್ವಾಮಿಗಳ ವೇಷ ಭೂಷಣಗಳು ಹಗರಣಗಳಲ್ಲಿ ಮನರಂಜನೆ ನೀಡಿತು.
ವಿಶೇಷವಾಗಿ ಈ ಹಗರಣದಲ್ಲಿ ಪ್ರಮುಖವಾದುದು ಅಂದರೆ ಜನರಿಗೆ ಅರಣ್ಯ ಇಲಾಖೆಯ ಅಡಿಯಲ್ಲಿ ಬರುವ ಅನೇಕ ಕಾಮಗಾರಿಯ ಮಾಹಿತಿ ಅದೇ ರೀತಿ ಕಾಡಿನಲ್ಲಿ ಗಿಡಗಳನ್ನು ನೆಟ್ಟು ಅರಣ್ಯ ರಕ್ಷಿಸಿ ಬೆಳೆಸಿ ಬೇಕೆಂದು ಜಾಗೃತಿ ಮೂಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವರ್ಷಗಳು ಕಳೆದಂತೆ ನಗೆ ಜಾತ್ರೆಯ ಹಗರಣ ದೃಶ್ಯಾವಳಿಗಳು ಸಂಖ್ಯೆಯು ಹೆಚ್ಚುತಾ ಅದೇ ರೀತಿ ಹಗರಣ ನೋಡಲು ಬರುವ ಭಕ್ತಾದಿಗಳ ಸಂಖ್ಯೆಯೂ ಮತ್ತಷ್ಟು ಅಧಿಕವಾಗಿದೆ.

ಕಾರಾವಾರದಲ್ಲಿ ಇಂದಿಗೂ ನಡೆಯುತ್ತದೆ ದಿಂಡಿ ಜಾತ್ರೆ
ಇನ್ನು ಕಾರಾವಾರದಲ್ಲಿ ಬ್ರಿಟಿಷರ ಕ್ರೌರ್ಯದ ವಿರುದ್ಧ ಜಾತ್ರೆ ಸಂದರ್ಭದಲ್ಲಿ ಈ ಹಿಂದೆ ವಿಡಂಬನಾತ್ಮಕವಾಗಿ ಪ್ರದರ್ಶಿಸುತ್ತಿದ್ದ ಹಾಲಕ್ಕಿ ಸಮುದಾಯದವರ ಅಣಕು ಪ್ರದರ್ಶನ ಈಗಲೂ ಮುಂದುವರಿದಿದೆ. ಕಾರವಾರ ತಾಲೂಕಿನ ಅಮದಳ್ಳಿಯಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ದಿಂಡಿ ಜಾತ್ರೆ ಮಹೋತ್ಸವ ನಡೆಸಲಾಗುತ್ತದೆ.
ಬ್ರಿಟಿಷರ ಕಾಲದಿಂದಲೂ ಹಾಲಕ್ಕಿ ಸಮುದಾಯದವರು ಈ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ಅಮದಳ್ಳಿಯ ಜಾತ್ರಾ ಮಹೋತ್ಸವದಲ್ಲಿ ಬೃಹತ್ ಗಾತ್ರದ ಪಂಜುರ್ಲಿ, ತೋಳ, ಕೋಣ ಸೇರಿದಂತೆ ಹತ್ತಾರು ಬಗೆಯ ಮಾದರಿಗಳನ್ನು ಪ್ರದರ್ಶಿಸಲಾಗಿತ್ತು. ಈ ಜಾತ್ರೆಯಲ್ಲಿ ಬೃಹತ್ ಗಾತ್ರದ ಈ ಪ್ರಾಣಿಗಳ ಮಾದರಿಯನ್ನು ಹೊತ್ತುಕೊಂಡು ಕಾಡುಜನರ ವೇಷಭೂಷಣದಲ್ಲಿ ಮೈದಾನಕ್ಕೆ ಬರುವ ಸ್ಥಳೀಯ ಊರುಗಳ ಜನರು ನೆರೆದವರನ್ನು ರಂಜಿಸುತ್ತಾರೆ.












Click it and Unblock the Notifications