• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಮಕ್ಕಳ ದಿನದಂದು ಪಾಲಕರಿಗೆ ಒಂದು ಕಿವಿಮಾತು...

By ಜಗದೀಶ ವಡ್ಡಿನ, ಬಾಡ, ಕಾರವಾರ
|
Google Oneindia Kannada News

ಸುಪ್ರಸಿದ್ಧ ಮನೋವಿಜ್ಞಾನಿ ಆಡ್ಲರನ ಪ್ರಕಾರ ಅಪರಾಧ ಮತ್ತು ಮನೋರೋಗಗಳಿಗೆ ಮುಖ್ಯ ಕಾರಣಗಳು ಎರಡು. 1. ಮಕ್ಕಳನ್ನು ಅತಿಮುದ್ದು ಮಾಡಿ ಬೆಳೆಸುವುದು. 2. ಮಕ್ಕಳನ್ನು ಪ್ರೇಮವಿಲ್ಲದೆ ಬೆಳೆಸುವುದು.

ಒಂದು ಮಗುವನ್ನು ಇನ್ನೊಂದು ಮಗುವಿನೆದುರು ಹೀಯಾಳಿಸಿ ಮಾತನಾಡಬಾರದು. ಹಾಗಿ ಮಾಡಿದರೆ ಮಗುವಿಗೆ ತಾನು ಇನ್ನೊಂದು ಮಗುವಿಗಿಂತ ಕೀಳೆಂಬ ಮನೋಭಾವ ಬೆಳೆಯುತ್ತದೆ. ಆತ್ಮ ಭರವಸೆ ಕುಗ್ಗಿ ಹೋಗಿ ಆ ಮಗು ಸ್ವತಂತ್ರವಾಗಿ ಏನನ್ನೂ ಮಾಡಲಾರದಂತಾಗುತ್ತದೆ.

ಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತುಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತು

ಮಕ್ಕಳ ಭವಿಷ್ಯತ್ತು ಅವರ ಮನಸ್ಸಿನ ಬೆಳವಣಿಗೆಯನ್ನು ಅವಲಂಬಿಸಿದೆ. ಮನಸ್ಸಿನ ಆರೋಗ್ಯ ಸರಿಯಿದ್ದರೆ, ದೇಹಾರೋಗ್ಯವೂ ಚೆನ್ನಾಗಿರುತ್ತದೆ. ಮಕ್ಕಳ ಮನೋವಿಜ್ಞಾನವು ಈ ದೃಷ್ಟಿಯಿಂದ ಮಹತ್ವ ಪಡೆದಿದೆ.

ಈ ಮಕ್ಕಳಿಗೆ ತಮ್ಮ ದಿನಾಚರಣೆಯ ಅರಿವೇ ಇಲ್ಲಈ ಮಕ್ಕಳಿಗೆ ತಮ್ಮ ದಿನಾಚರಣೆಯ ಅರಿವೇ ಇಲ್ಲ

ವಿಶ್ವದಾದ್ಯಂತ ಮಕ್ಕಳ ದಿನಾಚರಣೆಯನ್ನು ನವೆಂಬರ್ 20 ರಂದು ಆಚರಿಸುತ್ತಾರೆ. ಭಾರತದಲ್ಲಿ ನವೆಂಬರ್ 14 ರಂದು ಜವಾಹರ್ ಲಾಲ್ ನೆಹರುರವರ ಹುಟ್ಟುಹಬ್ಬದಂದು ಮಕ್ಕಳ ದಿನಾಚರಣೆಯನ್ನು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ. ಮಕ್ಕಳ ಹಕ್ಕು ಹಿತರಕ್ಷಣೆ ಮತ್ತು ಹೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾರೆ.

Special Article : United Nations Universal Children's Day

ವಿ.ಎನ್. ಕುಲಕರ್ಣಿ ಎನ್ನುವವರು 1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡಿನ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರು.

ಬಾಲ ಪ್ರತಿಭೆ : ರುಹಾನ್ ಆಳ್ವಾ ಭವಿಷ್ಯದ ಎಫ್ 1 ಚಾಲಕ

ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜಬೆತ್-2 ಅವರ ಜನ್ಮದಿನವನ್ನು ಧ್ವಜ ದಿನಾಚರಣೆಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು.

ಅತಿ ಕಿರಿಯ ವನ್ಯಜೀವಿ ಛಾಯಾಗ್ರಾಹಕ ವೇದಾಂಶ್ ಪಾಂಡೆಅತಿ ಕಿರಿಯ ವನ್ಯಜೀವಿ ಛಾಯಾಗ್ರಾಹಕ ವೇದಾಂಶ್ ಪಾಂಡೆ

ಆ ಸಂದರ್ಭದಲ್ಲಿ ಕುಲಕರ್ಣಿಯವರು ಮನಸ್ಸು ಸಹಜವಾಗಿಯೇ ಭಾರತೀಯ ಮಕ್ಕಳ ಸ್ಥಿತಿಗತಿಯ ಬಗ್ಗೆ ಮಿಡಿಯಿತು. ಇಂತಹದೊಂದು ಯೋಜನೆ ಭಾರತದಲ್ಲೂ ನಡೆಯಬೇಕು. ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಿಟ್ಟರು.

ದಿನಾಚರಣೆ, ಮಕ್ಕಳ ಭವಿಷ್ಯ, ದೆಹಲಿ ರಸ್ತೆ ಬದಿಯ ಬೆಂಕಿದಿನಾಚರಣೆ, ಮಕ್ಕಳ ಭವಿಷ್ಯ, ದೆಹಲಿ ರಸ್ತೆ ಬದಿಯ ಬೆಂಕಿ

ಮಕ್ಕಳ ಹಕ್ಕು ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು 20 ನವೆಂಬರ್ 1954 ರಂದು ಆಚರಿಸಲು ವಿಶ್ವಸಂಸ್ಥೆ ಕರೆನೀಡಿದರು. ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶ ಮಕ್ಕಳ ಹಕ್ಕು, ಹಿತರಕ್ಷಣೆ, ಯೋಗಕ್ಷೇಮ, ಮಕ್ಕಳ ಆರೋಗ್ಯ, ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗೆ ಶ್ರಮಿಸುವುದು. "ಇಂದಿನ ಮಕ್ಕಳೆ ಮುಂದಿನ ಜನಾಂಗ". ಪಾಲಕರಿಗೆ ಒಂದು ಕಿವಿಮಾತು. "ಮಕ್ಕಳಿಗಾಗಿ ಆಸ್ತಿಮಾಡಬೇಡಿ, ಮಕ್ಕಳನ್ನೆ ಆಸ್ತಿಯನ್ನಾಗಿಮಾಡಿ".

English summary
The United Nations Universal Children’s Day is celebrated every year on November 20. This day is marked each year as a reminder for communities around the globe to promote children's rights
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X