ತಲೆ ಸುತ್ತಿ ಬಿದ್ದ ಅಭ್ಯರ್ಥಿಗೆ ಕೊನೆಗೂ ಒಲಿದ ಗೆಲುವು
ಕಾರವಾರ, ಡಿಸೆಂಬರ್ 30: ಬೆಳಿಗ್ಗೆಯೇ ಮತ ಎಣಿಕಾ ಕೇಂದ್ರಕ್ಕೆ ತೆರಳಿದ್ದ ಮಹಿಳಾ ಅಭ್ಯರ್ಥಿಯೋರ್ವಳು ಊಟ, ನೀರು ಇಲ್ಲದೆ ಅಸ್ವಸ್ಥಗೊಂಡಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕೊನೆಗೂ ಆಕೆ ಹಳಕೋಟ ವಾರ್ಡ್ ನಿಂದ ಗೆಲುವಿನ ನಗೆ ಬೀರಿದ್ದಾಳೆ.
ತಾಲ್ಲೂಕಿನ ಕಡವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಕೋಟ ವಾರ್ಡ್ ನಿಂದ ಸ್ಪರ್ಧಿಸಿದ್ದ ರತೀಕಾ ಹುಲಸ್ವಾರ್ ಬೆಳಿಗ್ಗೆಯೇ ಕಾರವಾರದ ಸೇಂಟ್ ಮೈಕಲ್ ಸ್ಕೂಲ್ ನ ಮತ ಎಣಿಕಾ ಸ್ಥಳಕ್ಕೆ ಆಗಮಿಸಿದ್ದರು. ಮಧ್ಯಾಹ್ನದ ಹೊತ್ತಿಗೆ ಅವರನ್ನು ಮತ ಎಣಿಕಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಮತಗಳ ಸಂಖ್ಯೆ ಹೆಚ್ಚಿದ್ದ ಕಾರಣ ಸಂಜೆಯಾದರೂ ಮುಕ್ತಾಯವಾಗಿರಲಿಲ್ಲ.
ಅಭ್ಯರ್ಥಿ ರತೀಕಾ ಹುಲಸ್ವಾರ್ ಊಟ, ನೀರು ಸೇವಿಸದ ಕಾರಣ ಮತ ಎಣಿಕೆ ನಡೆಯುತ್ತಿರುವಾಗಲೇ ತಲೆ ಸುತ್ತಿ ಬಿದ್ದು ಅಸ್ವಸ್ತಗೊಂಡಿದ್ದರು. ತಕ್ಷಣ ಸ್ಥಳದಲ್ಲಿದ್ದ ಆರೋಗ್ಯ ಸಿಬ್ಬಂದಿ ಆರೋಗ್ಯ ಪರಿಶೀಲನೆ ನಡೆಸಿದ್ದರು. ಬಳಿಕ ಆಕೆಗೆ ಆಹಾರ ಪೂರೈಸಿದ್ದು, ಚೇತರಿಸಿಕೊಂಡಿದ್ದಾಳೆ.

ಕೊನೆಗೂ ಆಕೆ ಹಳಕೋಟ ವಾರ್ಡ್ ನಿಂದ ಗೆಲುವು ಕಂಡಿದ್ದಾಳೆ. ಆದರೆ ಬೆಳಿಗ್ಗೆಯಿಂದ ಉಪವಾಸ ಇದ್ದರೂ ಏನೂ ವ್ಯವಸ್ಥೆ ಮಾಡಿಲ್ಲ ಎಂದು ಕೆಲ ಏಜೆಂಟರೂ ಹಾಗೂ ಅಭ್ಯರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications