ಸೆ.4ರಿಂದ ಕಾರವಾರ-ಬೆಂಗಳೂರು ರೈಲು ಸಂಚಾರ

ಕಾರವಾರ, ಸೆಪ್ಟೆಂಬರ್ 03: ಕಾರವಾರ-ಬೆಂಗಳೂರು-ಕಾರವಾರ ರೈಲು ಸಂಚಾರ ಸೆಪ್ಟೆಂಬರ್ 4ರಿಂದ ಆರಂಭವಾಗಲಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ. ಮಾರ್ಚ್‌ನಲ್ಲಿ ಕೋವಿಡ್ ಲಾಕ್ ಡೌನ್ ಘೋಷಣೆ ಮಾಡಿದಾಗ ರೈಲು ಸಂಚಾರ ಸ್ಥಗಿತಗೊಂಡಿತ್ತು.

Recommended Video

      SriLanka ನೀರಿನಲ್ಲಿ IOC ಕಚ್ಚಾ ತೈಲ ಹಡಗಿನಲ್ಲಿ ಬೆಂಕಿ | Oneindia Kannada

      ವಿಶೇಷ ಪರೀಕ್ಷಾ ರೈಲು ಹೆಸರಿನಲ್ಲಿ ಕೊಂಕಣ ರೈಲ್ವೆ ಕಾರವಾರ-ಬೆಂಗಳೂರು-ಕಾರವಾರ ರೈಲನ್ನು ಶುಕ್ರವಾರದಿಂದ ಓಡಿಸಲಿದೆ. ಮುಂದಿನ ಆದೇಶದ ತನಕ ರೈಲುಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆ ಹೇಳಿದೆ.

      ರೈಲು ನಂಬರ್ 06585 ಯಶವಂತರಪುರ-ಕಾರವಾರ ಮತ್ತು ನಂ.06586 ಕಾರವಾರ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಈ ಹಿಂದೆ ರೈಲು ಸಂಚಾರ ನಡೆಸುತ್ತಿದ್ದ ವೇಳಾಪಟ್ಟಿ ಅನ್ವಯವೇ ಸಂಚಾರ ನಡೆಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

      Karwar Bengaluru Rail Service From September 4

      ಸೆ.4ರಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 8.25ಕ್ಕೆ ಕಾರವಾರ ತಲುಪಲಿದೆ. ಸೆಪ್ಟೆಂಬರ್ 5ರಂದು ಸಂಜೆ 6 ಗಂಟೆಗೆ ಕಾರವಾರದಿಂದ ಬೆಂಗಳೂರಿಗೆ ರೈಲು ಹೊರಡಲಿದೆ.

      ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣಿಕರು ಸಂಚಾರ ನಡೆಸಬೇಕಿದೆ. ರೈಲು 7 ಸ್ಲೀಪರ್, 1 3ಟೈರ್ ಎಸಿ, 1 2 ಟೈರ್ ಎಸಿ, 4 ಸಾಮಾನ್ಯ ಬೋಗಿಗಳು ಸೇರಿ 15 ಬೋಗಿಯನ್ನು ಒಳಗೊಂಡಿದೆ. ಈ ರೈಲಿಗೆ ಸ್ಟೇಷನ್‌ನಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಪ್ರಕಟಣೆ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+