ಚುನಾವಣೆಗೂ ಒಂದು ದಿನ ಮುನ್ನ ವಿವಿಧೆಡೆ IT, EC ದಾಳಿ

ಅಂಕೋಲಾ, ಮೇ 11: ಕಾರವಾರ ಕಾಂಗ್ರೆಸ್ ಅಭ್ಯರ್ಥಿ ಆಪ್ತ ಮಂಗಲ್ ದಾಸ್ ಎಂಬುವವರ ಮೇಲೆ ಇಂದು(ಮೇ 11) ಬೆಳಿಗ್ಗೆ ಐಟಿ(ಆದಾಯ ತೆರಿಗೆ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮೇ 12 ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಐಟಿ ದಾಳಿ ನಡೆಯುತ್ತಿದ್ದು, ಇದೀಗ ಅಂಕೋಲಾದ ಆವರ್ಸಾ ಎಂಬಲ್ಲಿ ಐಟಿ ದಾಳಿ ನಡೆದಿದೆ.

ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

IT raid on close associate of Karwar Congress candidates home in Ankola

ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಎದ್ದಲಬೊಮ್ಮನಹಟ್ಟಿಯಲ್ಲೂ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದು, ಸ್ಕಾರ್ಪಿಯೋ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 2 ಕೋಟಿಗೂ ಅಧಿಕ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಗಂಗಾವತಿ ಬಿಜೆಪಿ ಅಭ್ಯರ್ಥಿ ಸಹೋದರನಿಗೆ ಸೇರಿದ ಖಾಸಗಿ ಹೊಟೇಲ್ ಮೇಲೂ ನಿನ್ನೆ ರಾತ್ರಿ (ಮೇ 10) ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+