ಗ್ರಾ.ಪಂ ಚುನಾವಣೆ: ಉತ್ತರ ಕನ್ನಡದಲ್ಲಿ 1380 ಸ್ಥಾನಕ್ಕೆ 4432 ನಾಮಪತ್ರ ಸಲ್ಲಿಕೆ

ಕಾರವಾರ, ಡಿಸೆಂಬರ್ 13: ಇದೇ ತಿಂಗಳ ಡಿ‌.22 ರಂದು ಮತದಾನ ನಡೆಯಲಿರುವ ಉತ್ತರ ಕನ್ನಡ ಜಿಲ್ಲೆಯ ಒಟ್ಟು 101 ಗ್ರಾಮ ಪಂಚಾಯತಿಗಳ 1380 ಸ್ಥಾನಕ್ಕೆ 4432 ನಾಮಪತ್ರ ಸಲ್ಲಿಕೆಯಾಗಿದ್ದು, ಏಳು ಕಡೆಗಳಲ್ಲಿ ನಾಮಪತ್ರ ಸಲ್ಲಿಕೆಯಾಗಿಲ್ಲ.

ಕರಾವಳಿ ತಡಿ ಕಾರವಾರದಲ್ಲಿ 226 ಸ್ಥಾನಕ್ಕೆ 694 ನಾಮಪತ್ರ, ಅಂಕೋಲಾದ 226 ಸ್ಥಾನಕ್ಕೆ 745 ನಾಮಪತ್ರ, ಕುಮಟಾದ 321 ಸ್ಥಾನಕ್ಕೆ 1068, ಹೊನ್ನಾವರದಲ್ಲಿ 323 ಸ್ಥಾನಕ್ಕೆ 1072, ಭಟ್ಕಳದಲ್ಲಿ 284 ಸ್ಥಾನಕ್ಕೆ 853 ನಾಮಪತ್ರ ಸಲ್ಲಿಕೆ ಆಗಿವೆ.

ಅಂಕೋಲಾದಲ್ಲಿ 3, ಕಾರವಾರ ತಾಲೂಕಿನಲ್ಲಿ 2, ಹೊನ್ನಾವರ, ಭಟ್ಕಳ ತಾಲೂಕಿನಲ್ಲಿ ತಲಾ 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ.

Gram Panchayat Election: 4432 Nominations For 1380 Seats In Uttar Kannada District

ಇನ್ನು ಸಲ್ಲಿಕೆಯಾದ 4,432 ನಾಮಪತ್ರಗಳ ಪೈಕಿ 87 ನಾಮಪತ್ರ ಕ್ರಮಬದ್ಧವಾಗಿಲ್ಲ ಎಂದು ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಕಾರವಾರದಲ್ಲಿ ಒಂದು, ಅಂಕೋಲಾದಲ್ಲಿ 22, ಕುಮಟಾದಲ್ಲಿ 19, ಹೊನ್ನಾವರದಲ್ಲಿ 24, ಭಟ್ಕಳದ 21 ನಾಮಪತ್ರ ತಿರಸ್ಕೃತಗೊಂಡಿವೆ.

ಅಂತಿಮವಾಗಿ ಕಾರವಾರದಲ್ಲಿ 672, ಅಂಕೋಲಾದಲ್ಲಿ 715, ಕುಮಟಾದಲ್ಲಿ 1041, ಹೊನ್ನಾವರದಲ್ಲಿ 1019, ಭಟ್ಕಳದ 820, ಒಟ್ಟು 4267 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯತಿ ಚುನಾವಣೆಗೆ ಅತಿ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿವೆ. ಉಮೇದುವಾರಿಕೆ ಸಲ್ಲಿಸಿದವರಲ್ಲಿ ಹೆಚ್ಚಿನವರು ಯುವಜನರೇ ಆಗಿದ್ದು, ವಿದ್ಯಾವಂತರೂ ಕಳೆದ ಚುನಾವಣೆಗೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದಾರೆನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+