ಕೊನೆಗೂ ಕಾರವಾರಕ್ಕೆ ಬಂದ ಯುದ್ಧ ವಿಮಾನ: ಶೀಘ್ರವೇ ವೀಕ್ಷಣೆಗೆ ಲಭ್ಯವಾಗುವ ಸಾಧ್ಯತೆ!
ಕಾರವಾರ, ಸೆಪ್ಟೆಂಬರ್ 27: ಕಳೆದ ಹಲವು ವರ್ಷಗಳಿಂದ ನಿರೀಕ್ಷಿಸಲಾಗಿದ್ದ ಟುಪೆಲೊವ್-142 ಯುದ್ಧ ವಿಮಾನ ಕೊನೆಗೂ ಕಾರವಾರಕ್ಕೆ ಆಗಮಿಸಿದೆ. 9 ಬೃಹತ್ ಟ್ರಕ್‌ಗಳ ಮೂಲಕ ವಿಮಾನದ ಬಿಡಿಭಾಗಗಳನ್ನು ತಮಿಳುನಾಡಿನಿಂದ ತರಲಾಗಿದ್ದು, ಶೀಘ್ರದಲ್ಲಿಯೇ ಯುದ್ಧವಿಮಾನದ ಸಂಗ್ರಹಾಲಯ ನಿರ್ಮಾಣವಾಗುವ ಭರವಸೆ ಮೂಡಿದೆ.
ಹೌದು ಭಾರತೀಯ ಸೇನೆಯ ರಷ್ಯಾ ನಿರ್ಮಿತ ಟುಪೆಲೊವ್ 142 ಯುದ್ದವಿಮಾನ 1988 ರಲ್ಲಿ ಭಾರತೀಯ ನೌಕಾ ಸೇನೆಗೆ ಸೇರ್ಪಡೆಯಾಗಿತ್ತು. ಬಳಿಕ 2017ರಲ್ಲಿ ಸೇವಾ ಅವಧಿ ಪೂರ್ಣವಾದ ಹಿನ್ನೆಲೆಯಲ್ಲಿ ನಿವೃತ್ತಿಯಾದ ನೌಕೆಯನ್ನು ತಮಿಳುನಾಡಿನ ರಾಜೋಲಿ ನೌಕಾನೆಲೆಯಲ್ಲಿ ಇರಿಸಲಾಗಿತ್ತು.

ಇನ್ನು ಈ ಯುದ್ದವಿಮಾನದ ಸಂಗ್ರಹಾಲಯ ಸ್ಥಾಪನೆಗೆ ಕರ್ನಾಟಕ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದಿತ್ತು. ಆ ವೇಳೆ ಹಲವು ರಾಜ್ಯಗಳು ವಿಮಾನ ತಮಗೆ ಹಸ್ತಾಂತರಿಸುವAತೆ ಕೇಂದ್ರದ ಮೇಲೆ ಒತ್ತಡ ಹೇರಿದ್ದವು. ಆದರೆ ಉತ್ತರ ಕನ್ನಡ ಜನಪ್ರತಿನಧಿಗಳು ಸತತ ಪ್ರಯತ್ನ ನಡೆಸಿ ಯುದ್ಧ ವಿಮಾನ ಉತ್ತರ ಕನ್ನಡಕ್ಕೆ ಹಸ್ತಾಂತರವಾಗಲು ಕಾರಣೀಕರ್ತರಾಗಿದ್ದರು.
ಆದರೆ 2020 ಮಾರ್ಚ್‌ನಲ್ಲಿ ಜಿಲ್ಲಾಡಳಿತ ಹಾಗೂ ಕದಂಬ ನೌಕಾನೆಲೆ ನಡುವೆ ಒಪ್ಪಂದ ಆಗಿತ್ತಾದರೂ ಸಾಗಾಟ ವೆಚ್ಚ ಭರಿಸುವುದು ಸೇರಿದಂತೆ ಇನ್ನಿತರ ಮಾತುಕತೆಯಿಂದ ಬಾಕಿ ಉಳಿದಿತ್ತು. 2020 ಡಿಸೆಂಬರ್‌ನಲ್ಲಿ ವಿಮಾನ ಕಾರವಾರಕ್ಕೆ ಬರಬೇಕಿತ್ತು. ಆದರೆ ಕರೋನಾ ಕಾರಣದಿಂದ ವಿಮಾನ ಬಿಡಿಭಾಗದ ಸ್ಥಳಾಂತರ ಆಗಿರಲಿಲ್ಲ. ಆದರೆ ಇದೀಗ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿದೆ.

ಕೊನೆಗೂ ಯುದ್ದ ವಿಮಾನದ ಬಿಡಿಭಾಗಗಳನ್ನು ಹೊತ್ತ 9 ಬೃಹತ್ ಟ್ರಕ್‌ಗಳು ತಮಿಳುನಾಡಿನ ಅರಕ್ಕೊಣಮ್‌ನಿಂದ ಕಾರವಾವರವನ್ನು ಸತತ 5 ದಿನ ಪ್ರಯಾಣದ ಬಳಿಕ ತಲುಪಿವೆ.
ಭಾರತೀಯ ನೌಕಾದಳವು ವಿಮಾನವನ್ನು ಸಾಗಾಟ ಹಾಗೂ ಜೋಡಣೆಗೆ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿದೆ ನೀಡಿದ್ದು ಅದರಂತೆ ಸುಮಾರು 50 ಮೀಟರ್ ಉದ್ದದ ಹಾಗೂ ಟುಪೆಲೊವ್ ಯುದ್ದ ವಿಮಾನವನ್ನು ಒಂದು ತಿಂಗಳುಗಳ ಕಾಲ ಬಿಡಿಭಾಗಗಳನ್ನಾಗಿಸಿ ಕಾರವಾರಕ್ಕೆ ತರಲಾಗಿದೆ. ಸದ್ಯ ನಗರ ಪ್ರವೇಶ ಮಾಡಿರುವ ಯುದ್ದ ವಿಮಾನದ ಬಿಡಿಭಾಗಗಳನ್ನು ಹೊತ್ತ ಟ್ರಕ್‌ಗಳನ್ನು ಚಾಫೆಲ್ ಯುದ್ದ ನೌಕೆ ಸಂಗ್ರಹಾಲಯದ ಎದುರು ಫ್ಲೈ ಓವರ್ ಕೆಳಭಾಗದಲ್ಲಿ ನಿಲ್ಲಿಸಲಾಗಿದೆ.

ಇನ್ನು ಟುಪೆಲೊವ್ ಯುದ್ದ ವಿಮಾನ ಕಾರವಾರಕ್ಕೆ ತಂದು ಸ್ಥಾಪನೆ ಮಾಡುವ ಸಂಬಂಧ 4 ವರ್ಷ ಪ್ರಯತ್ನ ನಡೆಸಲಾಗಿದೆ. 2020ರಲ್ಲಿ ಜಿಲ್ಲಾಡಳಿತ ವಿಮಾನ ಸಾಗಣೆ ಹಾಗೂ ಜೋಡಣೆಗೆ ನೌಕಾದಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ವಿಮಾನವನ್ನು ತರಲಾಗಿದೆ. ಈಗಾಗಲೇ ಚಾಪೆಲ್ ಯುದ್ಧ ನೌಕೆ ಬಳಿ ಇಡಲು ಎಲ್ಲ ರಿತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನೊಂದು ತಿಂಗಳಲ್ಲಿ ವಿಮಾನದ ಬಿಡಿಭಾಗಗಳನ್ನು ಜೋಡಿಸಿ ಸಂಗ್ರಹಾಲಯವೂ ಪ್ರವಾಸಿಗರಿಗೆ ಲಭ್ಯವಾಗಲಿದೆ. ಇದರ ನಿರ್ವಹಣೆ ಜವಾಬ್ದಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.












Click it and Unblock the Notifications