ವಿದ್ಯಾರ್ಥಿಗಳಿಬ್ಬರಿಂದ ತಯಾರಾದ ಮೋಟರೀಕೃತ ಇಕೋ ಫ್ರೆಂಡ್ಲಿ ಸೈಕಲ್!
ಕಾರವಾರ, ಜನವರಿ 14: ಲಾಕ್ ಡೌನ್ ಅವಧಿಯಲ್ಲಿ ಶಾಲಾ- ಕಾಲೇಜುಗಳು ತೆರೆಯದೆ ವಿದ್ಯಾರ್ಥಿಗಳು ಮನೆಯಲ್ಲೇ ಬಂಧಿಯಾಗಿದ್ದರು. ಆದರೆ ಈ ಸಮಯವನ್ನು ಕಾರವಾರ ನಗರದ ಕಾಲೇಜು ವಿದ್ಯಾರ್ಥಿಗಳಿಬ್ಬರು ಸದುಪಯೋಗಪಡಿಸಿಕೊಂಡು, ಕಡಿಮೆ ವೆಚ್ಚದಲ್ಲಿ ಬ್ಯಾಟರಿ ಚಾಲಿತ ಸೈಕಲ್ ಅನ್ನು ತಯಾರಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.
ನಗರದ ಸೇಂಟ್ ಜೋಸೆಫ್ ಕಾಲೇಜಿನ ಪಿಯು ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ತನ್ವಿ ಚಿಪ್ಕರ್ ಹಾಗೂ ಕುನಾಲ್ ತಮ್ಮ ಸೈಕಲ್‌ಗಳನ್ನೇ ಬ್ಯಾಟರಿ ಚಾಲಿತ ಸೈಕಲ್‌ಗಳನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂದನಗದ್ದಾ ನಿವಾಸಿಗಳಾಗಿರುವ ತನ್ವಿ ಹಾಗೂ ಕುನಾಲ್ ಪ್ರತಿನಿತ್ಯ ಸುಮಾರು 6 ಕಿ.ಮೀ ಸೈಕಲ್ ತುಳಿದುಕೊಂಡು ಕಾಲೇಜಿಗೆ ತೆರಳಬೇಕಾಗಿತ್ತು.
ಇದರಿಂದಾಗಿ ತಮ್ಮ ಸೈಕಲ್ ಅನ್ನೇ ಮೋಟಾರು ಚಾಲಿತವನ್ನಾಗಿ ಮಾಡುವ ಯೋಚನೆ ಹೊಳೆದಿದ್ದು, ಕುನಾಲ್ ತಂದೆ ಜಗದೀಶ ಅವರ ಬಳಿ ಮಕ್ಕಳಿಬ್ಬರೂ ಸಲಹೆ ಪಡೆದುಕೊಂಡರು. ಸೈಕಲ್ ಅನ್ನು ಬ್ಯಾಟರಿ ಚಾಲಿತವನ್ನಾಗಿಸುವ ಕುರಿತಾಗಿ ಆನ್‌ಲೈನ್ ಮೂಲಕವೂ ಮಾಹಿತಿ ಕಲೆಹಾಕಿ ಅಗತ್ಯ ವಸ್ತುಗಳನ್ನು ತರಿಸಿಕೊಂಡು ಬ್ಯಾಟರಿ ಸೈಕಲ್ ಸಿದ್ಧಪಡಿಸುವ ಕೆಲಸ ಪ್ರಾರಂಭಿಸಿದ್ದರು. ಸುಮಾರು ಒಂದು ತಿಂಗಳ ಪರಿಶ್ರಮದ ಬಳಿಕ ಬ್ಯಾಟರಿ ಚಾಲಿತ ಇಕೋ ಫ್ರೆಂಡ್ಲಿ ಸೈಕಲ್ ಸಿದ್ಧವಾಗಿದೆ.

12 ವೋಲ್ಟ್‌ನ ಡಿಸಿ ಮೋಟಾರ್ ಅನ್ನು ಅಳವಡಿಸಲಾಗಿದೆ
ಈ ಸೈಕಲ್‌ನ ಬಂಪರ್ ಭಾಗದಲ್ಲಿ 12 ವೋಲ್ಟ್‌ನ ಎರಡು ಬ್ಯಾಟರಿಗಳನ್ನು ಇರಿಸುವ ಕಂಪಾರ್ಟ್‌ಮೆಂಟ್ ಅನ್ನು ಮಾಡಲಾಗಿದೆ. ಸೈಕಲ್‌ನ ಹಿಂಬದಿ ಚಕ್ರವನ್ನು ಚೈನ್ ಮೂಲಕ ತಿರುಗಿಸುವ ಪ್ರೀವ್ಹೀಲ್ ಪಕ್ಕದಲ್ಲಿ ಇನ್ನೊಂದು ಪ್ರೀವ್ಹೀಲ್ ಅನ್ನು ಅಳವಡಿಸಿದ್ದು, ಅದಕ್ಕೆ ಇನ್ನೊಂದು ಸಣ್ಣ ಚೈನ್ ಮೂಲಕ 12 ವೋಲ್ಟ್‌ನ ಡಿಸಿ ಮೋಟಾರ್ ಅನ್ನು ಅಳವಡಿಸಲಾಗಿದೆ. ಮೋಟಾರಿನ ಸ್ವಿಚ್ ಅನ್ನು ಬೈಕಿನ ಎಕ್ಸಿಲೇಟರ್ ಮಾದರಿಯಲ್ಲಿ ಸೈಕಲ್‌ನ ಬಲಬದಿಯ ಹ್ಯಾಂಡಲ್‌ಗೆ ಜೋಡಿಸಲಾಗಿದೆ. ಜೊತೆಗೆ ಸೈಕಲ್‌ಗೆ ಹೆಡ್‌ಲೈಟ್ ಹಾಗೂ ಹಿಂಬದಿಯ ಲೈಟ್ ಅನ್ನು ಸಹ ಅಳವಡಿಸಿದ್ದು, ರಾತ್ರಿ ವೇಳೆಯಲ್ಲೂ ಚಲಾಯಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸುತ್ತಾರೆ ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ ವಿದ್ಯಾರ್ಥಿ ಕುನಾಲ್.

ಚಾರ್ಜ್ ಆಗಲು ಮೂರರಿಂದ ನಾಲ್ಕು ಗಂಟೆಗಳು
ಇನ್ನು ಬ್ಯಾಟರಿಯಿಂದ ಮೋಟರ್ ಚಾಲನೆ ಪ್ರಾರಂಭಿಸಲು ಕೀ ಒಂದನ್ನು ಅಳವಡಿಸಲಾಗಿದ್ದು, ಅದನ್ನು ಆನ್ ಮಾಡಿದಾಗ ಮಾತ್ರ ಸೈಕಲ್ ಮೋಟರ್ ಸಹಾಯದಿಂದ ಚಲಿಸುತ್ತದೆ. ಉಳಿದ ಸಂದರ್ಭದಲ್ಲಿ ಸಾಮಾನ್ಯ ಸೈಕಲ್‌ನಂತೆ ಪೆಡಲ್ ತುಳಿದು ಸಹ ಈ ಸೈಕಲ್ ಅನ್ನು ಚಲಾಯಿಸಬಹುದಾಗಿದೆ. ಇನ್ನು ಬ್ಯಾಟರಿ ಚಾರ್ಜಿಂಗ್ ಮಾಡಲು ಸೈಕಲ್‌ನಲ್ಲಿ ಪ್ಲಗ್ ವೊಂದನ್ನು ಅಳವಡಿಸಿದ್ದು, ಬ್ಯಾಟರಿಯನ್ನು ತೆಗೆಯದೇ ಸೈಕಲ್‌ನಲ್ಲಿಯೇ ಇರಿಸಿ ಚಾರ್ಜ್ ಮಾಡಬಹುದಾಗಿದೆ. ಸೈಕಲ್‌ನ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಮೂರರಿಂದ ನಾಲ್ಕು ಗಂಟೆಗಳು ತಗುಲಲಿದ್ದು, ಒಮ್ಮೆ ಚಾರ್ಜ್ ಮಾಡಿದಲ್ಲಿ ಸುಮಾರು 25 ರಿಂದ 30 ಕಿಲೋ ಮೀಟರ್‌ವರೆಗೆ ಚಲಾಯಿಸಬಹುದು ಎನ್ನುತ್ತಾಳೆ ವಿದ್ಯಾರ್ಥಿನಿ ತನ್ವಿ ಚಿಪ್ಕರ್.

ಪಾಲಕರಿಗೂ ಸಂತಸ ಉಂಟುಮಾಡಿದೆ
ಆನ್‌ಲೈನ್‌ನಲ್ಲಿ ಬ್ಯಾಟರಿ ಚಾಲಿತ ಸೈಕಲ್‌ಗಳಿಗೆ 30 ರಿಂದ 50 ಸಾವಿರದವರೆಗೆ ತಗುಲಲಿದ್ದು, ಈ ಇಬ್ಬರು ವಿದ್ಯಾರ್ಥಿಗಳು ಸುಮಾರು 16 ರಿಂದ 18 ಸಾವಿರ ರೂಪಾಯಿ ವೆಚ್ಚದಲ್ಲಿಯೇ ತಮ್ಮ ಸೈಕಲ್‌ಗಳನ್ನು ಬ್ಯಾಟರಿ ಚಾಲಿತವನ್ನಾಗಿ ಪರಿವರ್ತಿಸಿದ್ದಾರೆ. ಇನ್ನು ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಿ ತಾವೇ ಬ್ಯಾಟರಿ ಚಾಲಿತ ಸೈಕಲ್‌ನ್ನು ಸಿದ್ಧಪಡಿಸಿರುವುದು ಅವರ ಪಾಲಕರಿಗೂ ಸಂತಸ ಉಂಟುಮಾಡಿದೆ. ಕಾಲೇಜಿಗೆ ತೆರಳಲು ಬೈಕಿನ ಬೇಡಿಕೆ ಇಡುವ ವಿದ್ಯಾರ್ಥಿಗಳಿರುವ ಈ ಕಾಲದಲ್ಲಿ ಇಕೋ ಫ್ರೆಂಡ್ಲಿ ಸೈಕಲ್‌ನ್ನು ಆಯ್ದುಕೊಂಡಿದಕ್ಕೆ ಮಕ್ಕಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಪಾಲಕ ಜಗದೀಶ.

ಎಲ್ಲ ವಿದ್ಯಾರ್ಥಿಗಳಿಗೂ ಮಾದರಿ
ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್- ಡೀಸೆಲ್ ದರಗಳು ಗಗನಕ್ಕೇರುತ್ತಿದ್ದು, ಸರ್ಕಾರ ಸಹ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಈ ವಿದ್ಯಾರ್ಥಿಗಳಿಬ್ಬರು ಕಡಿಮೆ ವೆಚ್ಚದಲ್ಲಿ ಸೈಕಲ್‌ನ್ನು ಮೋಟಾರು ಚಾಲಿತವನ್ನಾಗಿ ಪರಿವರ್ತಿಸಿರುವುದು ನಿಜಕ್ಕೂ ಎಲ್ಲ ವಿದ್ಯಾರ್ಥಿಗಳಿಗೂ ಮಾದರಿಯಾಗುವಂಥದ್ದಾಗಿದೆ.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications