ಡೀಸೆಲ್ ಟ್ಯಾಂಕರ್ ಅಪಘಾತ; ಸೋರಿಕೆಯಾದ ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದ ಜನ
ಕಾರವಾರ, ಜೂನ್ 3: ಡೀಸೆಲ್ ಟ್ಯಾಂಕರ್ ಲಾರಿಗೆ ಹಿಂಬದಿಯಿಂದ ಟಿಪ್ಪರ್ ಗುದ್ದಿದ ಪರಿಣಾಮ ಟ್ಯಾಂಕ್ ಒಡೆದು ಡೀಸೆಲ್ ಸೋರಿಕೆಯಾಗಿದ್ದು, ಸೋರುತ್ತಿದ್ದ ಡೀಸೆಲ್ ತುಂಬಿಕೊಳ್ಳಲು ಜನರು ಮುಗ್ಗಿಬಿದ್ದಿರುವ ಘಟನೆ ಸೋಮವಾರ ನಡೆದಿದೆ.
ಭಟ್ಕಳ ತಾಲ್ಲೂಕಿನ ಬೇಂಗ್ರೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಕಡೆಯಿಂದ ಶಿರಸಿಗೆ ಭಟ್ಕಳ ಮಾರ್ಗವಾಗಿ ಡೀಸೆಲ್ ತುಂಬಿಕೊಂಡಿದ್ದ ಟ್ಯಾಂಕರ್ ತೆರಳುತ್ತಿತ್ತು. ಇದೇ ವೇಳೆ ರಸ್ತೆಯ ಉಬ್ಬನ್ನು ದಾಟಿಸಲು ಒಂದೇ ಸಮನೆ ಬ್ರೇಕ್ ಹಾಕಿದ ಕಾರಣ ಹಿಂಬದಿಯಿಂದ ವೇಗದಲ್ಲಿ ಬರುತ್ತಿದ್ದ ಟಿಪ್ಪರ್ ಟ್ಯಾಂಕರ್ ಗೆ ಗುದ್ದಿದೆ.

ಇದರಿಂದ ಟ್ಯಾಂಕರ್ ಒಡೆದು ಡೀಸೆಲ್ ಸೋರಿಕೆಯಾಗಿದ್ದು, ರಸ್ತೆಯುದ್ದಕ್ಕೂ ಹರಿದಿದೆ. ಸುತ್ತಮುತ್ತಲಿನ ಮನೆಯವರು ಕೊಡ, ಬಕೆಟ್, ಪಾತ್ರೆಗಳನ್ನು ತಂದು ಒಡೆದ ಟ್ಯಾಂಕ್ ನಿಂದ ಡೀಸೆಲ್ ತುಂಬಿಕೊಳ್ಳಲು ಮುಗ್ಗಿಬಿದ್ದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ, ರಸ್ತೆಯಲ್ಲೆಲ್ಲ ಸಾಬು ನೀರು ಹಾಕಿದ್ದಾರೆ.












Click it and Unblock the Notifications