ಅಂಕೋಲಾದಲ್ಲಿ ಬಾಯ್ಲರ್ ಸ್ಪೋಟ: 4 ಕಾರ್ಮಿಕರಿಗೆ ಗಂಭೀರ ಗಾಯ
ಕಾರಾವಾರ, ಮಾರ್ಚ್ 01: ಅಂಕೋಲಾದ ಅಗಸೂರಿನಲ್ಲಿರುವ ಪ್ರಕೃತಿ ಪ್ರಾಡಕ್ಟ್ಸ್ ಕಂಪೆನಿಯಲ್ಲಿ ಬಾಯ್ಲರ್ ಸ್ಪೋಟಗೊಂಡಿದ್ದು, ನಾಲ್ವರು ಕಾರ್ಮಿಕರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕು ಅಗಸೂರಿನಲ್ಲಿ ಘಟನೆ ನಡೆದಿದೆ. ಗಾಯಾಳುಗಳನ್ನು ರಘು ನಾಯ್ಕ(25), ಸಂತೋಷ ಪೂಜಾರ(19), ಲಖನ್ ತೂರಿ(21) ಹಾಗೂ ರಾಜೇಂದ್ರ(37) ಎಂದು ಗುರುತಿಸಲಾಗಿದೆ.

ಓರ್ವ ಸ್ಥಳೀಯ, ಜಾರ್ಖಂಡ್ ನ ಮೂವರು ಸೇರಿ ನಾಲ್ವರಿಗೆ ಗಂಭೀರ ಗಾಯವಾಗಿದೆ. ಬಾಯ್ಲರ್ ಘಟಕದ ಬಳಿ ಕಾರ್ಯನಿರ್ವಹಿಸುತ್ತಿರುವಾಗಲೇ ಸ್ಪೋಟಗೊಂಡಿದೆ.

ಗಂಭೀರ ಗಾಯಗೊಂಡ ಕಾರ್ಮಿಕರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.











Click it and Unblock the Notifications