• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿಗೆ ಸಂಭ್ರಮಿಸಿದ ಕಾರ್ಯಕರ್ತರು

By ಕಾರವಾರ ಪ್ರತಿನಿಧಿ
|

ಕಾರವಾರ, ಮೇ 15 : ತ್ರಿಕೋನ ಸ್ಪರ್ಧೆಯ ಕಣವಾಗಿದ್ದ ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಅಂತೂ ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೆ ಶಾಸಕರಾಗಿದ್ದಾರೆ. ಆ ಮೂಲಕ ಶಿರಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಅಂಕೋಲಾ ಕ್ಷೇತ್ರವಿದ್ದಾಗಲೂ ಮೂರು ಬಾರಿ ಶಾಸಕರಾಗಿದ್ದ ಅವರು, 2008 ಹಾಗೂ 2013ರಲ್ಲಿ ಶಿರಸಿಯ ಶಾಸಕರಾಗಿದ್ದರು. ದಶಕದಿಂದ ಅಧಿಕಾರ ಏಕಸ್ವಾಮ್ಯದಲ್ಲಿರುವ ಕಾರಣಕ್ಕೆ ವಿರೋಧಿ ಅಲೆ, ಜೊತೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಣದ ನೇರ ವಿರೋಧವನ್ನು ಕಾಗೇರಿ ಎದುರಿಸುತ್ತಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಅಂತಿಮವಾಗಿ ಕಾಗೇರಿ 59,903 ಮತಗಳನ್ನು ಪಡೆದು ಕಾಂಗ್ರೆಸ್‌ನ ಭೀಮಣ್ಣ ನಾಯ್ಕರನ್ನು (41,558) 18,345 ಮತಗಳ ಅಂತರದಿಂದ ಸೋಲಿಸಿದ್ದಾರೆ. ತೃತೀಯ ಸ್ಥಾನದಲ್ಲಿ ಜೆಡಿಎಸ್ ನ ಶಶಿಭೂಷಣ ಹೆಗಡೆ (21,459) ಇದ್ದಾರೆ.

ಕಾಗೇರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕುಮಟಾದಲ್ಲಿ ಅವರ ಕಾರ್ಯಕರ್ತರು ಮೆರವಣಿಗೆ ನಡೆಸಿ ಸಂಭ್ರಮಿಸಿದರು.

English summary
Karnataka Election Results 2018: BJP candidate vishweshwara hegde kageri won in sirsi siddapur constituency. he got 59,903 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X